ಅರಸಿನಮಕ್ಕಿ: ಚಿತ್ಪಾವನಿ ಭಾಷೆಯಲ್ಲಿ ಯಕ್ಷಗಾನ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆ ವತಿಯಿಂದ ಅರಸಿನಮಕ್ಕಿಯ ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು.

ರಘುನಾಥ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಭೀಷ್ಮಪ್ರತಿಜ್ಞೆ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಶಾಲಿನಿ ಹೆಬ್ಬಾರ್ ಮದ್ದಳೆಯಲ್ಲಿ ವರುಣ್ ಹೆಬ್ಬಾರ್ ಚಂಡೆಯಲ್ಲಿ ಶ್ರೇಯಸ್ ಪಾಳಂದ್ಯೆ ಭಾಗವಹಿಸಿದರು. ಮುಮ್ಮೇಳರದಲ್ಲಿ ದಿನಕರ ಗೋಖಲೆ, ಮಹಾದೇವ ಶೆಂಡ್ಯೆ, ವರದ ಶಂಕರ ದಾಮ್ಲೆ, ನಾರಾಯಣ ಫಡಕೆ ಪಾತ್ರಗಳನ್ನು ನಿರ್ವಹಿಸಿದರು.

ಏಕಾಂಗಿಯಾಗಿ ಬಾವಿ ತೋಡಿದ ಶಿಶಿಲದ ವಿಶ್ವನಾಥ ಶೆಂಡ್ಯೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಗಜಾನನ ಅಭ್ಯಂಕರ ನರಸಿಂಹ ಪಾಳಂದ್ಯೆ ಮತ್ತಿತರರು ಸಹಕರಿಸಿದರು.

Leave a Reply

error: Content is protected !!