ರೆಖ್ಯದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ: ದನ, ನಾಯಿ ಸಾವು

ಶೇರ್ ಮಾಡಿ

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಹಲವು ಕಡೆ ಭಾನುವಾರ ಸಂಜೆಯಿಂದ ಭಾರಿ ಸಿಡಿಲು ಸಹಿತ ಮಳೆಯಾಗಿದ್ದು, ರೆಖ್ಯದಲ್ಲಿ ಸಿಡಿಲ ಆರ್ಭಟಕ್ಕೆ ದನ ಹಾಗೂ ನಾಯಿ ಸಾವಿಗೀಡಾಗಿದೆ.

ರೆಖ್ಯ ಗ್ರಾಮದ ಕುರುಡೇಲ್ ಸುಂದರ ಗೌಡ ಎಂಬವರ ಮನೆ ಮತ್ತು ಕೊಟ್ಟಿಗೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು ಸಂಪೂರ್ಣ ಸುಟ್ಟು ಹೋಗಿವೆ.
ಮನೆಯ ಮೇಲ್ಛಾವಣಿಯ ಒಂದು ಭಾಗಕ್ಕೂ ಹಾನಿಯಾಗಿದೆ. ಟಿವಿ, ಫ್ಯಾನ್ ಸಹಿತ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಈ ವೇಳೆ ಹಟ್ಟಿಯಲ್ಲಿದ್ದ ದನ ಹಾಗೂ ಮನೆಯ ಆವರಣದಲ್ಲಿದ್ದ ನಾಯಿ ಸಿಡಿಲಿನ ಆಘಾತದಿಂದ‌ ಮೃತಪಟ್ಟಿವೆ. ಮನೆಯವರು ಅಪಾಯದಿಂದ‌ ಪಾರಾಗಿದ್ದಾರೆ.

Leave a Reply

error: Content is protected !!