ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಪ್ರತಿಭಾ ಸಂಗಮ

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪುಣ್ಯ ಕ್ಷೇತ್ರ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಂಡೆ ಸ್ಕೂಲ್ ವತಿಯಿಂದ 2023-24ನೇ ಸಾಲಿನಲ್ಲಿ ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರನ್ನು ಜೂ.02ರಂದು ಮಾರ್ ವೆಳ್ಳಾ ಪಳ್ಳಿ ಸಭಾಂಗಣದಲ್ಲಿ ನಡೆದ ಪ್ರತಿಭಾ ಸಂಗಮ ಹಾಗೂ ಸಂಡೆ ಸ್ಕೂಲ್ ಅಧ್ಯಯನ ವರ್ಷ-2024ರ ಉದ್ಘಾಟನಾ ಸಮಾರಂಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಸಾಹಿತಿ ಶ್ರೀಮತಿ ಜೆಸ್ಸಿ.ಪಿ.ವಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನ ದಷ್ಟೇ ಸದ್ಗುಣ ಗಳು ವ್ಯಕ್ತಿತ್ವದ ಜೊತೆಯಾದಾಗ ಮಾತ್ರ ಸಮಗ್ರ ವ್ಯಕ್ತಿತ್ವ ಬೆಳೆಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ನ ಧರ್ಮಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ವಹಿಸಿದ್ದರು. ಸಮಾರಂಭ ದಲ್ಲಿ ಸಹಕಾರಿ ಕೃಷಿ ಪತ್ತಿನ ಬ್ಯಾಂಕ್ ನ ನಿವೃತ್ತ ಸೆಬಾಸ್ಟಿನ್ ಪುಳಿಕಾಯತ್ ಅವರ ದೀರ್ಘ ಕಾಲದ ಸೇವೆ ಹಾಗೂ ಚರ್ಚ್ ಗೆ ನೀಡಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ದ್ವಿತೀಯ ಪಿ ಯು ಸಿ ಮತ್ತು ಹತ್ತನೇ ತರಗತಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಡೆ ಸ್ಕೂಲ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗೂ ಬಹುಮಾನ ವಿತರಿಸಲಾಯಿತು.

ವಂದನಿಯ ಸಿಸ್ಟರ್ ಲಿಸ್ ಮಾತ್ಯು, ರೊಯ್ ಕೊಳಮ್ ಗರಾತ್ತ್, ನಿವೃತ್ತ ಸೈನಿಕ ಹಾಗೂ ಟ್ರಸ್ಟಿ ಅಲೆಕ್ಸ್ ಚೆ೦ಪಿತಾನಮ್, ರಕ್ಷಕ ಶಿಕ್ಷಕ ಸಂಘದ ಪ್ರಕಾಶ್ ಕೆ.ಜೆ, ಲಿಸ್ಸಿ, ಕುಮಾರ ಆಲ್ಟೊ, ಮೊದಲದವರು ಉಪಸ್ಥಿತರಿದ್ದರು.

Leave a Reply

error: Content is protected !!