ಭಾರತದಲ್ಲಿ ಮೊದಲ ಬಾರಿಗೆ ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ

ಶೇರ್ ಮಾಡಿ

ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಯಿಯೊಂದಕ್ಕೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ದಿಲ್ಲಿಯ ಪಶು ಆಸ್ಪತ್ರೆಯ ವೈದ್ಯರು ಇದನ್ನು ಪೂರೈಸಿದ್ದಾರೆ. 7 ವರ್ಷದ ಬೀಗಲ್‌ ತಳಿಯ ನಾಯಿ ಕಳೆದ 2 ವರ್ಷದಿಂದ ಮಿಟ್ರಲ್‌ ವಾಲ್‌ ರೋಗದಿಂದ ಬಳಲುತ್ತಿತ್ತು. ಇದರಿಂದಾಗಿ ನಾಯಿ ಹೃದಯದ ಎಡಭಾಗ ರಕ್ತವನ್ನು ಸರಿಯಾಗಿ ಪಂಪ್‌ ಮಾಡುತ್ತಿರಲಿಲ್ಲ. ದಿಲ್ಲಿಯ ಡಾ| ಭಾನುದೇವ್‌ ಶರ್ಮಾ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದರೆ ನಾಯಿಯ ಪ್ರಾಣಕ್ಕೆ ಅಪಾಯವಿತ್ತು. ಹೀಗಾಗಿ ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Leave a Reply

error: Content is protected !!