ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಯುವಕರ ಗೋಳಾಟ ಹೆಚ್ಚಾಗಿದೆ. ಈ ಹುಡುಗಿ ಸಿಗುತ್ತಿಲ್ಲ ಎಂಬ ವಿಷಯವನ್ನೇ ಇಟ್ಟುಕೊಂಡು ಅದೆಷ್ಟೋ ಜನರು ತಮಾಷೆಯ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಎಮ್ಮೆಯನ್ನು ಮದುವೆಯಾಗಿದ್ದಾನೆ. ಈ ಹಾಸ್ಯಮಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಫನ್ನಿ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ಕುರಿತ ವಿಡಿಯೋವನ್ನು ಮೋನಿ ಸಿಂಗ್ ಎಂಬವರು ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಎಮ್ಮೆಯನ್ನು ಸಂಪ್ರದಾಯಬದ್ಧವಾಗಿ ಮದುವೆಯಾಗುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ಮೊದಲಿಗೆ ಎಮ್ಮೆಗೆ ಹೂವಿನ ಹಾರವನ್ನು ಹಾಕಿ ನಂತರ ತಾನು ಕೂಡಾ ಹಾರವನ್ನು ಕೊರಳಿಗೆ ಹಾಕಿಕೊಳ್ಳುತ್ತಾನೆ. ಬಳಿಕ ಎಮ್ಮೆಯ ಹಣೆಗೆ ಸಿಂಧೂರವನ್ನು ಹಚ್ಚಿ, ಎಮ್ಮೆಯ ಮೇಲೇರಿ ಸವಾರಿ ಹೋಗಲು ನಿರ್ಧರಿಸುತ್ತಾನೆ. ಆತ ಮೇಲೇರುತ್ತಿದ್ದಂತೆ ಎಮ್ಮೆ ಆತನನ್ನು ಕೆಳಗೆ ಬೀಳಿಸಿ ಓಡಿ ಹೋಗಿದೆ. ಕೆಳಗೆ ಬಿದ್ದ ಪರಿಣಾಮ ಆ ಯುವಕ ಕಾಲಿಗೆ ಗಾಯಗಳಾಗಿವೆ.