ಕೇರಳದಲ್ಲಿ ಖಾತೆ ತೆರೆದ ಬಿಜೆಪಿ, ಪರಾಜಯಗೊಂಡ ಅಣ್ಣಾಮಲೈ

ಶೇರ್ ಮಾಡಿ

ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ತ್ರಿಶ್ಶೂರ್‌ ನಲ್ಲಿ ಭಾರತೀಯ ಜನತಾ ಪಕ್ಷದ ಸುರೇಶ್‌ ಗೋಪಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಂತಾಗಿದೆ.

ಮತ್ತೊಂದೆಡೆ ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪರಾಜಯಗೊಂಡಿದ್ದಾರೆ. ಡಿಎಂಕೆಯ ಗಣಪತಿ ರಾಜ್‌ ಕುಮಾರ್‌ ಅವರು ಬಿಜೆಪಿಯ ಅಣ್ಣಾಮಲೈ ಅವರನ್ನು 17,366 ಮತಗಳಿಂದ ಸೋಲಿಸಿದ್ದಾರೆ.

ಕೇರಳದ ತ್ರಿಶ್ಶೂರ್‌ ಲೋಕಸಭಾ ಕ್ಷೇತ್ರದಲ್ಲಿ ನಟ, ರಾಜಕಾರಣಿ, ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಗೆಲುವಿನ ನಗು ಬೀರಿದ್ದು, ಸಮೀಪದ ಪ್ರತಿಸ್ಪರ್ಧಿ ಸಿಪಿಐನ ವಿಎಸ್‌ ಸುನೀಲ್‌ ಕುಮಾರ್‌ ಸೋಲುಂಡಿದ್ದಾರೆ.

ತಿರುವನಂತಪುರಂನಲ್ಲಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಅವರು 23,000 ಸಾವಿರ ಮತಗಳ ಅಂತರ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ನ ಶಶಿ ತರೂರ್‌ ಹಿನ್ನಡೆ ಅನುಭವಿಸಿದ್ದಾರೆ.

ಉತ್ತರಪ್ರದೇಶದ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಹಿನ್ನಡೆ ಅನುಭವಿಸಿದ್ದು, ಗಾಂಧಿ ಕುಟುಂಬದ ನಿಷ್ಠ, ಕೈ ಅಭ್ಯರ್ಥಿ ಕೆಎಲ್‌ ಶರ್ಮಾ 77,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

Leave a Reply

error: Content is protected !!