ಕೊಕ್ಕಡ: ಮಳೆಗಾಲ ಆರಂಭವಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ ವತಿಯಿಂದ ಕೊಕ್ಕಡ ಪೇಟೆಯ ಚರಂಡಿಗಳ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ.
ಕೊಕ್ಕಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜೋಡುಮಾರ್ಗದಿಂದ ಕೊಕ್ಕಡ ಪೇಟೆಯವರೆಗೆ ರಸ್ತೆ ಬದಿಯ ಚರಂಡಿಗಳಲ್ಲಿ ಗಿಡಗಂಟಿ ಬೆಳೆದು ತ್ಯಾಜ್ಯ ತುಂಬಿ ಬ್ಲಾಕ್ ಆಗಿ ಮಳೆ ನೀರು ಹರಿಯಲು ಅಡ್ಡಿಯಾಗುತ್ತಿತ್ತು. ಮಳೆಯ ನೀರು ರಸ್ತೆಯಲ್ಲಿ ಹರಿಯುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಪಂಚಾಯಿತಿಯು. ಚರಂಡಿಯಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿ, ಕಸ, ಹೂಳುಗಳ ತೆರವು ಕಾರ್ಯ ಆರಂಭಿಸಿದೆ.
ಕೊಕ್ಕಡ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯ ಚರಂಡಿ ಕೆಲಸ ಆರಂಭಿಸಲಾಗಿದೆ ಅಲ್ಲದೆ ನೀರು ಹರಿದು ಹೋಗಲಿರುವ ಅಡ್ಡಿಗಳನ್ನು ಮಳೆ ಬರುವ ವೇಳೆ ಪರಿಶೀಲಿಸಿ ಅಂತ ಸ್ಥಳಗಳಲ್ಲಿ ನಿರ್ವಹಣೆ ಕಾಮಗಾರಿ ತಕ್ಷಣ ನಡೆಸಲಾಗುವುದು.
-ದೀಪಕ್ ರಾಜ್, ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಕೊಕ್ಕಡ