ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಚಿಕ್ಕಬಳ್ಳಾಪುರದ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ತಡರಾತ್ರಿ ನಡೆದಿದೆ. ನಗರದ ಬಿಬಿ ರಸ್ತೆಗೆ ಹೊಂದಿಕೊಂಡಂತಿರುವ ಕಂದವಾರ ರಸ್ತೆಯಲ್ಲಿನ ಶಾಸಕರ ಮನೆ ಮೇಲೆ ರಾತ್ರಿ ಸುಮಾರು 11.30ರ ಸಮಯದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದಾಗ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಕಳೆದ ಒಂದು ವರ್ಷದಿಂದ ಶಾಂತವಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ನಿನ್ನೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕರು ಹಾಗೂ ನೂತನ ಸಂಸದರ ಬೆಂಬಲಿಗರ ಮಧ್ಯೆ ರಾಜಕೀಯ ದ್ವೇಷ ಆರಂಭಗೊಂಡಿದ್ದು, ಇದಕ್ಕೆ ಪ್ರಥಮವಾಗಿ ಶಾಸಕರ ನಿವಾಸದ ಮೇಲೆ ಕಲ್ಲು ತೂರಾಟವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಇಂದು ಬೆಳಿಗ್ಗೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಸುತ್ತ ಪರಿಶೀಲನೆ ನಡೆಸಿ ನಂತರ ಮನೆಯಲ್ಲಿ ಸಿಸಿಟಿವಿಯಲ್ಲಿ ದಾಖಲಾಗಿರುವ ಪುಟೇಜ್‌ಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಎಂಟನೆಯ ತರಗತಿಯ ವಿದ್ಯಾರ್ಥಿಗಳಾದ ಪ್ರಜೋತ್, ಸಾಬೀಕ್, ಭಾಗ್ಯಶ್ರೀ, ಜೆನಿಲಿಯ, ಖುಷಿ, ಆಸ್ಟಿನ್, ಸುಜನ್, ನವನೀತ್, ಆತ್ಮಿ, ಮುರ್ಷಿದ, ಬಿಂದ್ಯಾ, ವರ್ಷ, ಡೆಲ್ನಾ, ಸಹನಾ, ಶ್ರೇಯ, ಮುಬಿನ್, ಅದ್ವೈತ್ ಪರಿಸರ ಜಾಗೃತಿ ಮೂಡಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವೈಭವ್.ಪಿ ಕಾರ್ಯಕ್ರಮವನ್ನು ನಿರೂಪಿಸಿ ಭವಿತ್ ವಂದಿಸಿದರು. ಪೋಷಕರಾದ ನಾರಾಯಣ ಬಲ್ಯ, ರಾಮಕೃಷ್ಣ ಉಬರಳೆ, ಬೋಸ್ಕೋ, ಖಲೀಲ್ ಮತ್ತು ದಿನೇಶ್ ಕುಮಾರ್ ಇವರು ಗಿಡಗಳ ಪ್ರಾಯೋಜಕತ್ವವನ್ನು ವಹಿಸಿದ್ದರು.