ಗೋಳಿತ್ತೊಟ್ಟು ವಿದ್ಯುತ್ ಬಳಕೆದಾರರ ವೇದಿಕೆ; ಅಧ್ಯಕ್ಷ: ಸತೀಶ್ ರೈ, ಕಾರ್ಯದರ್ಶಿ: ಕೊರಗಪ್ಪ ಗೌಡ

ಶೇರ್ ಮಾಡಿ

ನೆಲ್ಯಾಡಿ: ವಿದ್ಯುತ್ ಬಳಕೆದಾರರ ವೇದಿಕೆ ಗೋಳಿತ್ತೊಟ್ಟು ಇದರ ಅಧ್ಯಕ್ಷರಾಗಿ ಸತೀಶ್ ರೈ ಕೊಣಾಲುಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೊರಗಪ್ಪ ಗೌಡ ಕಲ್ಲಡ್ಕ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನೇಮಣ್ಣ ಪೂಜಾರಿ ಪೆರ್ನಾರು, ಅಬ್ದುಲ್ಲಾ ಕುಂಞಿ ಕೊಂಕೋಡಿ, ಜೊತೆ ಕಾರ್ಯದರ್ಶಿಯಾಗಿ ವೆಂಕಪ್ಪ ಗೌಡ ಡೆಬ್ಬೇಲಿ ಅವರು ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು ಅವರು ಮಾತನಾಡಿ, ಮಳೆಗಾಲದಲ್ಲಿ ನಾನಾ ಕಾರಣಗಳಿಂದಾಗಿ ಪದೇ ಪದೇ ವಿದ್ಯುತ್ ಅಡಚಣೆಯಾಗುತ್ತದೆ. ಈ ವೇಳೆ ವಿದ್ಯುತ್ ಬಳಕೆದಾರರು ಮೆಸ್ಕಾಂ ಜೊತೆಗೆ ಸಹಕರಿಸಬೇಕೆಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಕೊರಗಪ್ಪ ಗೌಡ ಕಲ್ಲಡ್ಕ ಅವರು ಮಾತನಾಡಿ, ಮರದ ಗೆಲ್ಲುಗಳು ವಿದ್ಯುತ್ ತಂತಿಯ ಮೇಲೆಯೇ ಬಾಗಿರುವುದೂ ಪದೇ ಪದೇ ವಿದ್ಯುತ್ ಅಡಚಣೆಗೂ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರದ ಗೆಲ್ಲುಗಳನ್ನು ತೆರೆವುಗೊಳಿಸುವ ಸಂಬಂಧ ವಿದ್ಯುತ್ ಬಳಕೆದಾರರೂ ಮೆಸ್ಕಾಂ ಸಿಬ್ಬಂದಿಗಳ ಜೊತೆ ಕೈಜೋಡಿಸಬೇಕು. ವಿದ್ಯುತ್ ಬಳಕೆದಾರರ ವೇದಿಕೆಯೂ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು. ಬಳಕೆದಾರರ ವೇದಿಕೆ ಸದಸ್ಯರು, ವಿದ್ಯುತ್ ಬಳಕೆದಾರರು ಉಪಸ್ಥಿತರಿದ್ದರು.

Leave a Reply

error: Content is protected !!