ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ: ವಿಶ್ವ ಪರಿಸರ ದಿನಾಚರಣೆಯನ್ನು ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಠಾರದಲ್ಲಿ ಜೂ.5ರಂದು ಆಚರಿಸಲಾಯಿತು.

ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವರ್ಗೀಸ್ ಕೈಪನಡ್ಕ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಸಂಚಾಲಕರಾದ ರೇ.ಫಾ.ಜೈಸನ್ ಸೈಮನ್ ಒಐಸಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡವನ್ನು ನೆಟ್ಟು ಪರಿಸರದ ಮಹತ್ವದ ಬಗ್ಗೆ ವಿವರಿಸುತ್ತ ಮರಗಳನ್ನು ನೆಟ್ಟು ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಶುದ್ಧ ಪರಿಸರ ನಾಶವಾಗುವುದರೊಂದಿಗೆ ನೀರಿನ ಕೊರತೆ ಉಂಟಾಗಬಹುದು, ಆದುದರಿಂದ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಬೆಳೆಸಬೇಕೆಂದು ಹೇಳಿದರು.

ಕುಮಾರಿ ಫಾತಿಮಾತ್ ಅಪ್ನ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!