ಜೇಸಿಐ ಭಾರತದ ವಲಯ 15ರ ಮಧ್ಯಂತರ ಸಮ್ಮೇಳನ “ತುಂತುರು” ಜೆಸಿಐ ವಿಟ್ಲ ಘಟಕದ ನೇತೃತ್ವದಲ್ಲಿ ನಡೆಯಿತು.
ಸಮ್ಮೇಳನದಲ್ಲಿ ಜೆಸಿಐ ಗುರಿ ಉದ್ದೇಶಗಳನ್ನು ಈಡೇರಿಸಲು ಶ್ರಮಿಸಿದ ಘಟಕಗಳಿಗೆ ವಿವಿಧ ರೀತಿಯ ಮನ್ನಣೆ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿ ಘಟಕ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದೆ.
ವಲಯಾಧ್ಯಕ್ಷ ಜೇಸಿ ಗಿರೀಶ್.ಎಸ್.ಪಿ.ಮತ್ತು ವಲಯ ಉಪಾಧ್ಯಕ್ಷರಾದ ಜೇಸಿ ಶಂಕರ್ ರಾವ್ ಮತ್ತು ವಲಯ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಉಪ್ಪಿನಂಗಡಿ ಘಟಕಾಧ್ಯಕ್ಷೆ ಜೇಸಿ ಲವೀನಾ ಪಿಂಟೊ ‘ಬಿ’ ಪ್ರಾಂತ್ಯದ “ಅತ್ಯುತ್ತಮ ರನ್ನರ್ ಘಟಕಾಧ್ಯಕ್ಷ ಪ್ರಶಸ್ತಿ” ಸೇರಿದಂತೆ ಘಟಕಕ್ಕೆ ಗೋಲ್ಡನ್ ಘಟಕ ಪುರಸ್ಕಾರ, ಯುವ ರತ್ನ ಪುರಸ್ಕಾರ, ರಜತ ಸಿಂಚನ ಪ್ರಶಸ್ತಿ, ಪ್ರೇರಣಾ ತರಬೇತಿ ಗೌರವ ಸ್ಮರಣೆಕೆ, ವಾಟ್ಸ್ ಆ್ಯಪ್ ಸ್ಟೇಟಸ್ ವಿನ್ನರ್ ಪುರಸ್ಕಾರ, ವಿಶ್ವ ಆರೋಗ್ಯ ದಿನಾಚರಣೆಯ ಪುರಸ್ಕಾರ, ಜೇಸಿ ಮಿನುಗು ತಾರೆ ಪ್ರಶಸ್ತಿ, ಸ್ಟಾರ್ ಪರ್ಫಾರ್ಮರ್ ಪ್ರಶಸ್ತಿ ಪತ್ರ ಪಡೆದುಕೊಂಡು ಉಪ್ಪಿನಂಗಡಿ ಘಟಕ ವಲಯದಲ್ಲಿ ವಿಶೇಷ ಗೌರವಕ್ಕೆ ಭಾಜನವಾಗಿದೆ. ಕರುನಾಡ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜೇಸಿ ಕುಶಾಲಪ್ಪ ನೇತೃತ್ವದ ಜೇಸಿಐ ತಂಡ ಮೂರನೇ ಸ್ಥಾನ ಪಡೆದು ನಗದು ಮತ್ತು ಪ್ರಶಸ್ತಿ ಪಡೆದುಕೊಂಡರು.
ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ, ವಲಯಾಧಿಕಾರಿ ಜೇಸಿ ಶೇಖರ್ ಗೌಂಡತ್ತಿಗೆ, ಪೂರ್ವ ವಲಯಾಧಿಕಾರಿ ಜೇಸಿ ಮೋಹನ್ ಚಂದ್ರ ತೋಟದ ಮನೆ, ಪೂರ್ವಾಧ್ಯಕ್ಷ ಜೇಸಿ ಶಶಿಧರ್ ನೆಕ್ಕಿಲಾಡಿ, ಜೇಸಿ ಮಹೇಶ್ ಖಂಡಿಗ, ಜೇಸಿ ದಿವಾಕರ ಶಾಂತಿನಗರ, ಕಾರ್ಯದರ್ಶಿ ಜೇಸಿ ಸುರೇಶ್, ಜೊತೆ ಕಾರ್ಯದರ್ಶಿ ಜೇಸಿ ಸುಮನ್ ಬಜತ್ತೂರು ಸೇರಿದಂತೆ ಘಟಕದ 25ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿರುತ್ತಾರೆ.