ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಶೇರ್ ಮಾಡಿ

ನೂಜಿಬಾಳ್ತಿಲ: ವಿಶ್ವ ಪರಿಸರ ದಿನಾಚರಣೆಯನ್ನು ಬೆಥನಿ ಪ್ರೌಢಶಾಲೆ ನೂಜಿಬಾಳ್ತಿಲದಲ್ಲಿ ಜೂ.5ರಂದು ಆಚರಿಸಲಾಯಿತು.

ಪ್ರೌಢಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ, ಪ್ರಕೃತಿಯ ಹಾಡಿಗೆ ನೃತ್ಯ ಮಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಫಾ.ವಿಜೋಯ್ ವರ್ಗೀಸ್ ವಹಿಸಿ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.

ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಔಷಧ ಗಿಡಗಳ ಹೆಸರುಗಳನ್ನು ಪಟ್ಟಿ ಮಾಡುವ ಸ್ಪರ್ಧೆ, ಔಷಧ ಗಿಡಗಳನ್ನು ಬಗ್ಗೆ ವಿವರಿಸುವ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್, ಮುಖ್ಯ ಗುರುಗಳಾದ ತೋಮಸ್ ಏ.ಕೆ, ಸಹಶಿಕ್ಷಕರಾದ ಬಿಜು ಕೆ ಜೆ, ಸುಮಿತಾ ಬಿ ಟಿ, ಶಿಲ್ಪ.ಎ., ಜಿನಿ, ದೈ.ಶಿ. ಶಿಕ್ಷಕರಾದ ಮತಾಯಿ ಓ.ಜೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶಾಂಭವಿ , ಜಿನ್ಸಿ ಜೋಸೆಫ್, ಬೀನಾ ಜಾರ್ಜ್ , ಆನಿ ಸಲೀನ್, ದಿಲ್ ಶಾದ್, ಶ್ವೇತಾ, ದೈ.ಶಿ.ಉಪನ್ಯಾಸಕರಾದ ಪುನೀತ್ ಉಪಸ್ಥಿತರಿದ್ದರು. ಶಿಕ್ಷಕೇತರ ಸಿಬ್ಬಂದಿಗಳಾದ ಯೋಹನ್ನಾನ್, ಅನ್ನಮ.ಎಂ, ಸಂತೋಷ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಉಜ್ವಲ್ ಸ್ವಾಗತಿಸಿ, ಹೇಮಂತ್ ವಂದಿಸಿದರು. ವಿದ್ಯಾರ್ಥಿನಿ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!