ಶ್ರೀಕ್ಷೇತ್ರ ಧರ್ಮಸ್ಥಳ ದೇವರ ದರ್ಶನ ಸಮಯ ಬದಲು

ಶೇರ್ ಮಾಡಿ

ನೇಸರ 28:  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೀಪಾವಳಿ ಬಳಿಕ ನ. 4 ರಿಂದ ರಂಗಪೂಜೆ, ಬೆಳ್ಳಿರಥೋತ್ಸವ, ಪಲಕ್ಕಿ ಉತ್ಸವ ಮೊದಲಾದ ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ, ದರ್ಶನ ಸಮಯ ಬೆಳಗ್ಗೆ 6 ರಿಂದ ಅಪರಾಹ್ನ 2.30 ಸಂಜೆ 5 ರಿಂದ ರಾತ್ರಿ 8.30ರ ವರೆಗೆ(ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸವಾಗುವ ಸಾಧ್ಯತೆಯಿದೆ). ಅನ್ನಪೂರ್ಣ ಛತ್ರದಲ್ಲಿ ಬೆಳಗ್ಗೆ 10.30 ರಿಂದ 3 ಹಾಗೂ ರಾತ್ರಿ 7 ರಿಂದ 9 ರ ವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ. ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೆಳಗ್ಗೆ 9 ರಿಂದ 12, ಸಂಜೆ 5 ಹಾಗೂ ರಾತ್ರಿ 7 ರಿಂದ 9 ರ ವರೆಗೆ ಭೇಟಿ ಮಾಡಬಹುದು. ಮಂಜೂಷಾ ವಸ್ತು ಸಂಗ್ರಹಾಲಯವು ಬೆಳಗ್ಗೆ 9 ರಿಂದ ಸಂಜೆ 5.30ರ ವರೆಗೆ ವೀಕ್ಷಣೆಗೆ ತೆರೆದಿರಲಿದೆ. ಕಾರು ಮ್ಯೂಸಿಯಂ ಬೆಳಗ್ಗೆ 8.30ರಿಂದ ಅಪರಾಹ್ನ 1 ಹಾಗೂ 2 ರಿಂದ 7 ರ ವರೆಗೆ ತೆರೆದಿರುತ್ತದೆ. ಹರಕೆ ಮಂಡೆ ಬೆಳಗ್ಗೆ 6 ರಿಂದ ಅಪರಾಹ್ನ 2 ಮತ್ತು ಸಂಜೆ 5ರಿಂದ 7 ರ ವರೆಗೆ ತೆರೆದಿರಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

 

Leave a Reply

error: Content is protected !!