ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ನಿವಾಸಿ ಹೇಮಾವತಿ (37 ) ಮೃತ ಮಹಿಳೆ. ಹೇಮಾವತಿ ಅವರು ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ಮೃತರ ಅಕ್ಕನ ಮಗ ಎಸೆಸೆಲ್ಸಿ ಓದುತ್ತಿರುವ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ. ಮೃತರು ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು.