
ಕಡಬ:ಶ್ರೀ. ಕ್ಷೇ.ಧ.ಗ್ರಾ.ಯೋ.ಬೀ.ಸಿ.ಟ್ರಸ್ಟ್ (ರಿ) ಹಾಗೂ ಶ್ರೀ. ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ ಸುಬ್ರಹ್ಮಣ್ಯ ಉಪವಿಭಾಗ ಸುಬ್ರಹ್ಮಣ್ಯ ವಲಯ ಇದರ ಜಂಟಿ ಆಶ್ರಯ ದಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ನಿನ್ನೆ ನಡೆಯಿತು.
ರಾಜೇಶ್ ಒಗ್ಗು ಅಧ್ಯಕ್ಷರು ಶ್ರೀ .ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.ಚಂದ್ರಾವತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಬಿಳಿನೆಲೆ ಹಾಗೂ ಆಡಳಿತ ಅಧಿಕಾರಿ ಶ್ರೀ. ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಗಳಾಗಿ ಅಪೂರ್ವ ಅಚ್ರಪ್ಪಾಡಿ ಅರಣ್ಯಾಧಿಕಾರಿಗಳು, ಸುಬ್ರಹ್ಮಣ್ಯ ಉಪವಿಭಾಗ ಸುಬ್ರಹ್ಮಣ್ಯ ವಲಯ, ಸತೀಶ್ ಎರ್ಕ ವಲಯಾಧ್ಯಕ್ಷರು ,ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ,ಭವಾನಿಶಂಕರ ಮೇಲಂಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಬಿಳಿನೆಲೆ ವಲಯ,ಮಾಲತೇಶ್ ವನಪಾಲಕರು ಸುಬ್ರಹ್ಮಣ್ಯ ವಲಯ ಇವರುಗಳು ಉಪಸ್ಥಿತರಿದ್ದರು.
ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕಿನ ಕೃಷಿ ಅಧಿಕಾರಿ ಸೋಮೆಶ್ ನಿರೂಪಿಸಿದರು.ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಮೇಲ್ವಿಚಾರಕ ಆನಂದ ಡಿ.ಬಿ.ಸ್ವಾಗತಿಸಿದರು.ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್. ಎ ವಂದಿಸಿದರು.









