ನೇಸರ ಫೆ.17: ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರ್ ಇನ್ಫೋಟೆಕ್ ಆಶ್ರಯದಲ್ಲಿ ಪ್ರೇರಣಾ ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮ ದಡಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹಾಗೂ ಉತ್ತಮ ಓದು ತರಬೇತಿ ಕಾರ್ಯಕ್ರಮವು ಮೊರಾರ್ಜಿ ವಸತಿ ಶಾಲೆ ಪಂಜ ಇದರ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಯಿತು.ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ ನಿವೃತ್ತ ನೌಕರರು ಆಗಿರುವ ಕೃಷ್ಣ ವೈಲಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷರು ಆಗಿರುವ ಜೇಸಿ.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ವೇದಿಕೆಯಲ್ಲಿ ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು, ಜೇಸಿ.ಸೋಮಶೇಖರ ನೇರಳ,ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರು ಆಗಿರುವ ಚಲಪತಿ ಮತ್ತು ಕಾರ್ಯಕ್ರಮ ನಿರ್ದೇಶಕ ಜೇಸಿ.ಜೀವನ್ ಶೆಟ್ಟಿ ಗದ್ದೆ ಉಪಸ್ಥಿತರಿದ್ದರು.ಜೇಸಿ.ಗಗನ್ ಕಿನ್ನಿ ಕುಮೇರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ಜೇಸಿ.ವಾಚಣ್ಣ ಕೆರೆಮೂಲೆ ಜೇಸಿ.ವಾಣಿ ನುಡಿದರು.ಜೇಸಿ.ಪ್ರವೀಣ್ ಕಾಯರಮತ್ತು ಜೇಸಿ.ಅಶೋಕ ಕುಮಾರ್ ಪಾಂಡಿ ಗದ್ದೆ ಅತಿಥಿಗಳನ್ನು ಹಾಗೂ ತರಬೇತುದಾರರನ್ನು ಸಭೆಗೆ ಪರಿಚಯಿಸಿದರು. ಘಟಕದ ಪೂರ್ವ ಅಧ್ಯಕ್ಷರು ಆಗಿರುವ ಜೇಸಿ.ಚಂದ್ರಶೇಖರ ಕುಕ್ಕುಪುಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜೇಸಿ ಕಾರ್ಯದರ್ಶಿ ಜೇಸಿ.ಕೌಶಿಕ ಕುಳ ಧನ್ಯವಾದ ಸಮರ್ಪಣೆ ಮಾಡಿದರು. ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು ಹಾಗೂ ಜೇಸಿ.ಸೋಮಶೇಖರ ನೇರಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
—ಜಾಹೀರಾತು—