ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ

ಶೇರ್ ಮಾಡಿ

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಕಾರ್ಯಕ್ರಮ ಜೂ.25ರಂದು ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ನೆಲ್ಯಾಡಿ ಹೊರ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಶಿವರಾಮ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಅಧಿಕಾರ ಸಂಕೇತವಾದ ಬ್ಯಾಡ್ಜ್ ಗಳನ್ನು ಹಸ್ತಾಂತರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ವರ್ಗೀಸ್ ಕೈಪನಡ್ಕ ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಶಾಲಾ ಹಂತದಲ್ಲಿ ಮಕ್ಕಳು ಬೆಳೆಸಿಕೊಳ್ಳಬೇಕು. ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ಉತ್ತಮ ನಾಯಕರಾಗಬಹುದು. ನಾಯಕತ್ವ ಗುಣವು ಹಂತ ಹಂತವಾಗಿ ವ್ಯವಸ್ಥಿತವಾಗಿ ಬರಬೇಕು. ನಾಯಕನಾದವನು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಹೊಂದಾಣಿಕೆಯಿಂದ ಶಾಲಾ ಕೆಲಸವನ್ನು ನಿಭಾಯಿಸಬೇಕು, ಶಾಲೆಯ ಶಿಸ್ತು ನಿಯಮಗಳು ಬದಲಾಗಬಾರದು ಎಂಬ ಕಿವಿ ಮಾತು ಹೇಳಿದರು.

ಸಂಸ್ಥೆಯ ಸಂಚಾಲಕರಾದ ಫಾ.ಜೈಸನ್ ಸೈಮನ್, ಆರಕ್ಷಕರಾದ ನವೀನ್, ಉಪಪ್ರಾಚಾರ್ಯರಾದ ಜೋಸ್ ಎಂ.ಜೆ, ಉಪಸ್ಥಿತರಿದ್ದರು.

ಶಾಲಾ ನಾಯಕನಾಗಿ ರಿಸ್ಟನ್ ರೋಯಿ, ಗೃಹಮಂತ್ರಿಯಾಗಿ ಅಲೆನ್ ಶಿಬು, ವಿದ್ಯಾಮಂತ್ರಿಯಾಗಿ ಲಾಲಿತ್ಯ, ವಾರ್ತಾ ಮಂತ್ರಿಯಾಗಿ ಸೋನಾ ಮರಿಯ, ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಿತಿ ಜೈನ್, ಕ್ರೀಡಾ ಮಂತ್ರಿಯಾಗಿ ಆಶಿಸ್ ಬೋಸ್, ಸಂಸದೀಯ ವ್ಯವಹಾರಗಳ ಮಂತ್ರಿಯಾಗಿ ಜೋಯೆಲ್, ಆರೋಗ್ಯಮಂತ್ರಿಯಾಗಿ ಶಿಫ ಹಾಗೂ ಇತರ 24 ವಿದ್ಯಾರ್ಥಿ ಮಂತ್ರಿಗಳು ಪ್ರಮಾಣವಚನವನ್ನು ಸ್ವೀಕರಿಸಿದರು.

ಜೋಸ್ ಎಂ.ಜೆ ಸ್ವಾಗತಿಸಿದರು, ರಿಸ್ಟನ್ ರೋಯಿ ವಂದಿಸಿದರು. ಶಿಕ್ಷಕಿ ನಯನ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!