ಹಾರ-ಕೊಕ್ಕಡ ರಸ್ತೆ, ನೆಲ್ಯಾಡಿ, ಕೊಕ್ಕಡ ಸಂಪರ್ಕಿಸುವ ರಸ್ತೆ ಕೆಸರುಮಯ; ಸಂಪರ್ಕ ಸೇತುವೆಯಾದರೂ, ರಸ್ತೆ ಸ್ಥಿತಿ ಅಯೋಮಯ

ಶೇರ್ ಮಾಡಿ

ನೆಲ್ಯಾಡಿಯ ಸಂತೆಕಟ್ಟೆ ರಸ್ತೆಯ ಮೂಲಕ ಹಾರ-ಕೊಕ್ಕಡ ರಸ್ತೆ, ನೆಲ್ಯಾಡಿ ಮತ್ತು ಕೊಕ್ಕಡ ಸಂಪರ್ಕಿಸುವ ಈ ರಸ್ತೆಯು ಕೆಸರುಮಯವಾಗಿದ್ದು ಸಂಚರಿಸಲು ಹರಸಾಹಸ ಪಡುತ್ತಿರುವ ಸಾರ್ವಜನಿಕರು.

ನೆಲ್ಯಾಡಿ ಮತ್ತು ಕೊಕ್ಕಡ ಜೊತೆಗೆ ಅತೀ ಹತ್ತಿರದಲ್ಲಿ ಸಂಪರ್ಕ ಕಲ್ಪಿಸಿಕೊಡುವ ಬಹುಮುಖ್ಯರಸ್ತೆ ಇದಾಗಿದ್ದು ಪಡಡ್ಕ ಎಂಬಲ್ಲಿ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಕಳೆದ ಆರ್ಥಿಕ ವರ್ಷದಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಂಡು ಸಾರ್ವಜನಿಕರು ಸಂತೋಷ ಭರಿತರಾಗಿದ್ದರು

ಈತನ್ಮದ್ಯೆ ಮಳೆಗಾಲ ಪ್ರಾರಂಭವಾಗಿ ಕೆಲವು ದಿನಗಳು ಕಳೆಯುವಷ್ಟರಲ್ಲಿ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸೇತುವೆಗೆ ಸಂಪರ್ಕಿಸುವ ರಸ್ತೆಗೆ ಹಾಕಲಾದ ಮಣ್ಣು ಸಂಪೂರ್ಣವಾಗಿ ಸಡಿಲಗೊಂಡು ವಾಹನಗಳು ಹೂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕದಲ್ಲಿದ್ದಾರೆ. ಹೊಸ ಸೇತುವೆ ಇದ್ದರು ಕೊಕ್ಕಡ ಸುತ್ತು ಬಳಸಿ ಮನೆ ಸೇರುವ ಸ್ಥಿತಿ ನಿರ್ಮಾಣವಾಗಿದೆ. ಹಾಲು ಡೈರಿಗೆ ಹೋಗುವವರು, ಶಾಲಾ ವಿದ್ಯಾರ್ಥಿಗಳಿಗೆ ಇದು ಕಂಟಕವಾಗಿದೆ ಸ್ಥಳಿಯಾಡಳಿತ ಇತ್ತ ಗಮನ ಹರಿಸುವರೇ ಸಾರ್ವಜನಿಕರ ಅಪೇಕ್ಷೆಯಾಗಿದೆ.

ಶಾಸಕ ಹರೀಶ್ ಪೂಂಜಾ ಅವರು ಸೇತುವೆ ನಿರ್ಮಿಸಿ ಕೊಟ್ಟರೂ, ಇದಕ್ಕೆ ಸಂಪರ್ಕಿಸುವ ರಸ್ತೆಗೆ ಸಡಿಲವಾದ ಮಣ್ಣು ಹಾಕಿರುವ ಪರಿಣಾಮ ಸಂಚರಿಸಲು ಸಾಹಸ ಪಡುವಂತಾಗಿದೆ.
-ಲಿಸ್ಸಿ ಪಡಡ್ಕ

ಪಡಡ್ಕ ಸಾರ್ವಜನಿಕರ ಬಹುದಿನದ ಕನಸು ನೆರವೇರಿದ ಸಂತಸದ ನಡುವೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟ ಪರಿಣಾಮ ಸುತ್ತು ಬಳಸಿ ಪಯಣಿಸುವ ಸಂಕಟ ಎದುರಾಗಿದೆ. ಪಂಚಾಯತ್ ವತಿಯಿಂದ ರಸ್ತೆಗೆ ಕಲ್ಲುಗಳನ್ನು ಹಾಕಿದ್ದರೂ ಕೂಡ ಸಂಚರಿಸಲು ಯೋಗ್ಯವಾಗಿಲ್ಲ.
– ಜೇಮ್ಸ್ ಪಡಡ್ಕ

 

Leave a Reply

error: Content is protected !!