ಕೋಲ್ಪೆ: ಸಮಸ್ತ ಸ್ಥಾಪನ ದಿನಾಚರಣೆ

ಶೇರ್ ಮಾಡಿ

ಉಲಮಾಗಳ ಮಾರ್ಗದರ್ಶನದಂತೆ ನಡೆಯೋಣ-ಇಸ್ಹಾಕ್ ಫೈಝಿ

ನೆಲ್ಯಾಡಿ: ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಶಾಖೆ ವತಿಯಿಂದ ಸಮಸ್ತ ಸ್ಥಾಪನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಹಾಗೂ ಸಂದೇಶ ಭಾಷಣ ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.

ಕೋಲ್ಪೆ ಬಿಜೆಎಂ ಖತೀಬರಾದ ಇಸ್ಹಾಕ್ ಫೈಝಿ ಅವರು ಸಂದೇಶ ನೀಡಿ, ಪೂರ್ವಿಕರು ನಮಗೆ ಒಳಿತಿನ ಪಥ ತೋರಿಸಿದ್ದಾರೆ. ಸಮಸ್ತವು ನೂರರ ಸನಿಹದಲ್ಲಿದೆ. ಹಲವಾರು ಉಲಮಾಗಳು ಸೇರಿ ಇಸ್ಲಾಮಿನ ನೈಜ ಆದರ್ಶವನ್ನು ನಮಗೆ ತಲುಪಿಸಿದ್ದಾರೆ. ಇವೆಲ್ಲವನ್ನು ಯುವ ಜನತೆ ಅರಿಯಬೇಕು. ಎಲ್ಲರೂ ಉಲಮಾಗಳ ಮಾರ್ಗದರ್ಶನದಂತೆ ನಡೆಯಬೇಕು ಎಂದು ಹೇಳಿದರು.

ಕೋಲ್ಪೆ ಬಿಜೆಎಂ ಅಧ್ಯಕ್ಷರಾದ ಕೆ.ಕೆ ಅಬೂಬಕ್ಕರ್‌ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ಕೋಲ್ಪೆ ಯೂನಿಟ್ ಅಧ್ಯಕ್ಷರಾದ ರಹೀಮ್ ಎಂ.ಕೆ, ಕೋಶಾಧಿಕಾರಿ ಇಸ್ಮಾಯಿಲ್ ಕೆ.ಕೆ, ಬಿಜೆಎಂ ಉಪಾಧ್ಯಕ್ಷರಾದ ಎಸ್.ಇಕ್ಬಾಲ್, ಕೋಲ್ಪೆ ನೂರಾನಿಯ ಮದ್ರಸದ ಮುಖ್ಯಗುರು ಹಮೀದ್ ದಾರಿಮಿ, ಮದ್ರಸ ಉಸ್ತುವಾರಿ ಎಸ್.ಕೆ ರಝಾಕ್, ಕೊಣಾಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ರಫೀಕ್ ಕೆ.ಇ., ಯೂನಿಟ್ ಮಾಜಿ ಅಧ್ಯಕ್ಷರಾದ ಸಲೀಮ್ ಎಂ.ಕೆ, ಇರ್ಷಾದ್, ಮದ್ರಸ ಅಧ್ಯಾಪಕರು,ವಿದ್ಯಾರ್ಥಿಗಳು, ಜಮಾಅತರು ಉಪಸ್ಥಿತರಿದ್ದರು. ಕೋಲ್ಪೆ ಬಿ.ಜೆ.ಎಂ ಕಾರ್ಯದರ್ಶಿ ಸಾದಿಕ್ ನಿರೂಪಿಸಿದರು. ಝುನೈಫ್ ಸ್ವಾಗತಿಸಿ, ಇಮಾದ್ ವಂದಿಸಿದರು.

Leave a Reply

error: Content is protected !!