ಮೆಸ್ಕಾಂ ಇಲಾಖೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹ
ಕೊಕ್ಕಡ: ಶಿಬಾಜೆ ಗ್ರಾಮದ ಬರ್ಗಳ ಎಂಬಲ್ಲಿ ವಿದ್ಯುತ್ ಕಂಬದ ಒಂದು ತಂತಿ ತುಂಡಾಗಿ, ಕಂಬಕ್ಕೆ ವಿದ್ಯುತ್ ಸ್ಪರ್ಶಿಸಿ ನಡೆದು ಕೊಂಡು ಹೋಗುತ್ತಿದ್ದ ಯುವತಿ ಸಾವನ್ನಪ್ಪಿದ್ದ ಘಟನೆ ಜೂ.27ರಂದು ಮಧ್ಯಾಹ್ನ 3 ಗಂಟೆಗೆ ವೇಳೆ ನಡೆದಿದೆ.
ಮೃತಪಟ್ಟ ಯುವತಿ ಪ್ರತೀಕ್ಷಾ 21(ವ)ರವರು ಮಿಸೂ ಪಾರ್ಸೆಲ್ ತರಲು ಹೋದ ಸಂದರ್ಭದಲ್ಲಿ ವಿದ್ಯುತ್ ನೆಲದಲ್ಲಿ ಸ್ಪರ್ಶಗೊಂಡು ಪ್ರತೀಕ್ಷಾ ಸ್ಥಳದಲ್ಲೇ ಸಾವನ್ನಪ್ಪಿದರು. ಈ ವೇಳೆ ಪ್ರತೀಕ್ಷಾರನ್ನು ರಕ್ಷಿಸಿಸಲು ಹೋದ ತಂದೆ ಗಣೇಶ್ ಶೆಟ್ಟಿಗೂ ವಿದ್ಯುತ್ ತಗುಲಿದೆ.
ಪ್ರತೀಕ್ಷಾ ರವರು ಕೊಕ್ಕಡ ಮೆಡಿಕಲ್ ನಲ್ಲಿ ವೃತ್ತಿ ಜೀವನದ ನಡೆಸುತ್ತಿದ್ದರು. ಮೃತರು ತಾಯಿ ರೋಹಿಣಿ, ತಂಗಿ ವೀಕ್ಷಾ ಮತ್ತು ತಮ್ಮ ಸುಜಯ್ ಅವರನ್ನು ಅಗಲಿದ್ದಾರೆ.
ಘಟನಾ ಸ್ಥಳದಲ್ಲಿ ಅನೇಕ ಬಾರಿ ವಿದ್ಯುತ್ ಕಂಬದಲ್ಲಿ ತಂತಿ ತುಂಡಾಗಿ ಕಂಬಕ್ಕೆ ವಿದ್ಯುತ್ ಸ್ಪರ್ಶಿಸಿ ನೆಲದಲ್ಲಿ ಬೆಂಕಿ ಬರುತ್ತಿತ್ತು ಹಾಗೂ ಸ್ಥಳದಲ್ಲಿ ನಡೆದು ಕೊಂಡು ಹೋಗುವಾಗ ವಿದ್ಯುತ್ ಸ್ಪರ್ಶಿಸಿಸುತ್ತಿದ್ದನ್ನು ಮೃತಪಟ್ಟ ಯುವತಿಯ ತಾಯಿ ರೋಹಿಣಿ ಅವರು ಮೆಸ್ಕಾಂ ಇಲಾಖೆ ತಿಳಿಸಿದ್ದರು. ಬಳಿಕ ಪವರ್ ಮ್ಯಾನ್ ಬಂದು ಸರಿಪಡಿಸಿದ್ದರು ಆದರೆ ನಂತರವು ಇದೆ ರೀತಿಯ ಘಟನೆ ನಡೆದಿದೆ. ಇಲಾಖೆ ತಿಳಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದರೆ ಇಂದು ಯುವತಿ ಸಾವನ್ನಪ್ಪಿರುವುದಕ್ಕೆ ಇಲಾಖೆಯೆ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನು ತಡೆಗಟ್ಟಿದ ಗ್ರಾಮಸ್ಥರು:
ಘಟನಾ ಸ್ಥಳಕ್ಕೆ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯುತ್ ಕಂಬವನ್ನು ಸರಿಪಡಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ಬರುವವರೆಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹೋಗಲು ಬೀಡದೆ ಗ್ರಾಮಸ್ಥರು ತಡೆಗಟ್ಟಿದ್ದಾರೆ. ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ಇದ್ದು, ಆಸ್ಪತ್ರೆಗೆ ತಹಶೀಲ್ದಾರ್ ಪ್ರಥ್ವಿಸಾನಿಕಂ ಭೇಟಿ ನೀಡಿ ಘಟನೆ ಕುರಿತು ಮಾಹಿತಿಯನ್ನು ಮನೆಯವರಿಂದ ಪಡೆದಿದ್ದಾರೆ.