ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ ಪದಗ್ರಹಣ

ಶೇರ್ ಮಾಡಿ

ನೆಲ್ಯಾಡಿ: ವಯಸ್ಸು ಎಂಬುದು ಯಾವುದೇ ಸೇವೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ಒಂದು ಉದಾಹರಣೆಯಾಗಿದೆ. ಇಂದಿನ ಯುವಜನಕ್ಕೆ ಹಿರಿಯರ ಮಾರ್ಗದರ್ಶನ ಅತಿ ಅಗತ್ಯವಾಗಿದೆ, ಎಂಬುದಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಗೆ ನೂತನವಾಗಿ ಆಯ್ಕೆಯಾದ ಶೀನಪ್ಪ. ಎಸ್ ಮತ್ತು ತಂಡದವರ ಪದಗ್ರಹಣ ಸಮಾರಂಭವು ಜೂ.29ರಂದು ನ್ಯೂ ಮಿಲೇನಿಯಂ ಹಾಲ್ ಸಂತ ಜಾರ್ಜ್ ಎಜುಕೇಶನ್ ಇನ್ಸ್ಟ್ಯೂಟ್ ನೆಲ್ಯಾಡಿಯಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಡಬ ತಾಲೂಕಿನ ಅಧ್ಯಕ್ಷರ ವಿಮಲ್ ಕುಮಾರ್ ಮಾತನಾಡಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ.ಅರವಿಂದ ರಾವ್ ಕೇದಿಗೆ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಯ ಬೆಳವಣಿಗೆಯಲ್ಲಿ ಸವಾಲುಗಳನ್ನು ಕಾಣುತ್ತೇವೆ. ಅಂತಹ ಸವಾಲುಗಳ ನಡುವೆ ಎದ್ದು ನಿಂತು ಕಾರ್ಯಾಚರಿಸುವ ಸಂಸ್ಥೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಆಗಿದೆ, ಪ್ರತಿವರ್ಷ ಅಕ್ಟೋಬರ್ 18 ಅಂತರ್ ರಾಷ್ಟ್ರೀಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ದಿನವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ಜಲದಾರದಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸಂಸ್ಥೆಯನ್ನು ಗುರುತಿಸುವಂತಾಗಿದೆ ಎಂದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಪೆರ್ನಾಂಡಿಸ್, ಸಿಡಿ ಕೋಆರ್ಡಿನೇಟರ್ ಡಾ.ಸದಾನಂದ ಕುಂದರ್, ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್, ನಿಕಟಪೂರ್ವ ಅಧ್ಯಕ್ಷರಾದ ವೆಂಕಟರಮಣ. ಆರ್, ಸೀನಿಯರೇಟ್ ಅಧ್ಯಕ್ಷೆ ಪುಷ್ಪ ನಾರಾಯಣ ಬಲ್ಯ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ.ಕೆ ಉಪಸ್ಥಿತರಿದ್ದರು.

ಅಧ್ಯಕ್ಷ ನಾರಾಯಣ ಬಲ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ನಿರೂಪಿಸಿ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡುವುದರೊಂದಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೀನಪ್ಪ.ಎಸ್ ಅವರಿಗೆ ಪ್ರಮಾಣವಚನವನ್ನು ಬೋಧಿಸಿ ಅಧಿಕಾರವನ್ನು ಹಸ್ತಾಂತರಿಸಿದರು. ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಮೋಹನ್ ಕುಮಾರ್.ಡಿ, ಕೋಶಾಧಿಕಾರಿ ಪ್ರಕಾಶ್.ಕೆ.ವೈ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ನೂತನ ಅಧ್ಯಕ್ಷರಾದ ಶೀನಪ್ಪ.ಎಸ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಎಲ್ಲರ ಸಹಕಾರವನ್ನು ಕೋರಿ, ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋಧಿಸಿದರು.
ಜಯಂತಿ.ಬಿ ಜೇಸಿವಾಣಿ ವಾಚಿಸಿದರು. ಪುರಂದರ ಗೌಡ.ಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್.ಡಿ, ವಂದಿಸಿದರು.

Leave a Reply

error: Content is protected !!