ನೆಲ್ಯಾಡಿ : ಆರ್ಲ ದ ಸೆಂಟ್ ಮೇರಿಸ್ ಚರ್ಚ್ ವತಿಯಿಂದ ಮಹಿಳಾ ಸಬಲಿಕರಣ ಮತ್ತು ಜಾಗೃತಿ ಉದ್ದೇಶದಿಂದ ಕಾರ್ಯಗಾರವನ್ನು ಜು.7ರಂದು ನಡೆಯಿತು.
ಚರ್ಚ್ ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು ನೇತೃತ್ವವನ್ನು ವಹಿಸಿ ಜಾಗೃತಿ ಮಹಿಳೆ ಸಮಾಜ ಮತ್ತು ಸಂಸ್ಕೃತಿಯ ತಳಹದಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆರ್ಲ ಸೆಂಡ್ ಮೇರಿಸ್ ಮಹಿಳಾ ವೇದಿಕೆಯ ಸಿಸ್ಟರ್ ಅಲೀಸ್, ಬಿನ್ಸಿ ಜೋಸ್ಟಿನ್, ಆನ್ಸಿ ವರ್ಗೀಸ್, ಲೀಲಾ, ಸುಮಾ ಪ್ರಕಾಶ್, ಸುಜಾ ಸೆಲಿನ್ ಮೊದಲದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು ನೂರಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಬಾಗವಹಿಸಿದರು.