ಕಡಬ: ಸೈoಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ

ಶೇರ್ ಮಾಡಿ

ಕಡಬ: ಸೈoಟ್ ಆನ್ಸ್ ಶಾಲೆಯಲ್ಲಿ ಮೊದಲ ಶಿಕ್ಷಕ -ರಕ್ಷಕ ಸಂಘದ ಸಭೆ ನಡೆಯಿತು.

ಮೊಬೈಲ್ ಬಳಕೆಯಿಂದ ಮಕ್ಕಳ ಬೆಳವಣಿಗೆಯಲ್ಲಿ ಆಗುವ ಪರಿಣಾಮಗಳು, ಮೊಬೈಲ್ ಬಳಕೆಯ ಸಾಧಕ -ಬಾಧಕಗಳು, ಮಕ್ಕಳು ಮೊಬೈಲ್ ಮತ್ತು ತಂತ್ರಜ್ಞಾನವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ, ಮಕ್ಕಳು ಅತಿಯಾದ ಮೊಬೈಲ್ ಬಳಕೆ ತಪ್ಪಿಸಲು ಪೋಷಕರು ಕೈಗೊಳ್ಳಬೇಕಾದ ವಿಧಾನಗಳು, ಅದಕ್ಕೆ ಪರ್ಯಾಯ ಮಾರ್ಗಗಳು, ಪ್ರಸುತ್ತ ಜೀವನ ಶೈಲಿ ಮತ್ತು ಹತ್ತು ವರ್ಷದ ಹಿಂದಿನ ಜೀವನ ಶೈಲಿಯ ನಡುವಿನ ವ್ಯತ್ಯಾಸ ಇವುಗಳ ಬಗ್ಗೆ ವಂ.ಅನಿಲ್ ಐವನ್ ಫೆರ್ನಾಂಡಿಸ್, ನಿರ್ದೇಶಕರು ಕೆನರಾ ಕಮ್ಯುನಿಕೇಶನ್ ಸೆಂಟರ್ ಮಂಗಳೂರು ಇವರು ಕಡಬದ ಸೈoಟ್ ಆನ್ಸ್ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿ’ಸೋಜಾ ಅವರು ವಹಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರ ಪ್ರೋತ್ಸಾಹವೂ ಅಗತ್ಯ ಎಂದು ಹೇಳಿದರು.

ಶಾಲಾ ಪ್ರಾಂಶುಪಾಲರಾದ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್ ಶಾಲಾ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು.

2023 -24 ನೇ ಸಾಲಿನ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅವರ ಸೇವೆಯನ್ನು ಗುರುತಿಸಿ ಸಸಿಗಳನ್ನು ನೀಡಿ ಗೌರವಿಸಲಾಯಿತು. ಬಳಿಕ 2024- 25ನೇ ಸಾಲಿನ ನೂತನ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಚಾಲಕರು ಹೂವು ನೀಡಿ ಸ್ವಾಗತಿಸಿದರು.

ದೈಹಿಕ ಶಿಕ್ಷಕರಾದ ಸಮದ್ ಮತ್ತು ಅರುಣ್ ಕುಮಾರ್ ಹಾಗೂ ಕನ್ನಡ ಶಿಕ್ಷಕಿ ಸುದರ್ಶನ ರವರಿಗೆ, ಅವರ ಸಾಧನೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ 2023- 24 ನೇ ಸಾಲಿನ ಉಪಾಧ್ಯಕ್ಷರಾದ ಸತೀಶ್ ನಾಯ್ಕ, ನೂತನ ಉಪಾಧ್ಯಕ್ಷರಾದ ಗಿರಿಧರ್ ರೈ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ದಕ್ಷ ಸ್ವಾಗತಿಸಿ, ಎಲಿಜಬೆತ್ ವಂದಿಸಿದರು. ಕಾರ್ಯಕ್ರಮವನ್ನು ದಿವ್ಯ ಜ್ಯೋತಿ ನಿರೂಪಿಸಿದರು.

Leave a Reply

error: Content is protected !!