ನೆಲ್ಯಾಡಿ: 36 ವರುಷಗಳ ಹಿಂದೆ ನೆಲ್ಯಾಡಿಯ ಮಂಡಲ ಪಂಚಾಯಿತಿ ಹಾಗೂ ಸಾರ್ವಜನಿಕರ ಸಹಕಾರದಿಂದ ಬೆಥನಿ ವಿದ್ಯಾ ಸಂಸ್ಥೆಯನ್ನು ಅಂದು ಸಣ್ಣದಾಗಿ ಆರಂಭಿಸಲಾಯಿತು. ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ದೃಷ್ಟಿಯಿಂದ ಈ ಇಂಗ್ಲಿಷ್ ಮೀಡಿಯಂ ಸಂಸ್ಥೆ ಆರಂಭಗೊಂಡಿತು. ಅನೇಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡಿ ದೇಶ ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಗೆ ಹೆಮ್ಮೆ ಎನಿಸಿದೆ. ಇದೀಗ ಹೆಮ್ಮರವಾಗಿ, ವಿಶಾಲವಾಗಿ ಸಂಸ್ಥೆ ಬೆಳೆದು ನಿಂತಿದೆ. ಹೊಸ ಹೊಸ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕಲಿತಲ್ಲಿ ಸಮಾಜಕ್ಕೆ ಏನಾದರೂ ಹೊಸತನ್ನು ನೀಡಲು ಸಾಧ್ಯ ಎಂಬ ಉದ್ದೇಶದಿಂದ ಹೊಸದಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಇ ಸ್ಟ್ರೀಮ್ ಲ್ಯಾಬ್ ಅನ್ನು ಆರಂಭಿಸಲಾಗಿದೆ ಎಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಸ್ಥಾಪಕ ಸಂಚಾಲಕ ಸಖರಿಯಾಸ್ ನಂದಿಯಾಟ್ ಹೇಳಿದರು.
ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಆರಂಭಗೊಂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಇ ಸ್ಟ್ರೀಮ್ ಪ್ರಯೋಗಾಲಯದ ಉದ್ಘಾಟನೆಯನ್ನು ಜು.11ರಂದು ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಫಾ.ಜೈಸನ್ ಸೈಮನ್ ಒಐಸಿ ಅವರು ವಹಿಸಿ ಪ್ರಾಸ್ತಾವಿಕನೊಂದಿಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಫಾ.ಜಿಜನ್, ನೆಲ್ಯಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಸಲಾಂ ಬಿಲಾಲ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಇ ಸ್ಟ್ರೀಮ್ ನ ನಿರ್ದೇಶಕ ಅಜಯ್, ಮುಖ್ಯ ಶಿಕ್ಷಕ ಜಾರ್ಜ್, ಐಟಿಐ ಪ್ರಿನ್ಸಿಪಾಲ್ ಸಜಿ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಡಾ.ವರ್ಗೀಸ್ ಕೈಪನಡ್ಕ ಸ್ವಾಗತಿಸಿದರು. ಅಲಿಷಾ ಮತ್ತು ಆಲ್ಬ ನಿರೂಪಿಸಿದರು. ಉಪಪ್ರಿನ್ಸಿಪಾಲ್ ಜೋಸ್ ಎಂ.ಜೆ ವಂದಿಸಿದರು.