ರಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ಕಡಬ: ರಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಜುಲೈ 12ರಂದು ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು, ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕ ರೆ.ಫಾ.ಜೇಕಬ್ ಅವರು ನೆರವೇರಿಸಿದರು.

ಕಡಬ ಆರಕ್ಷಕ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಭಾಗ್ಯಮ್ಮ ಅವರು ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಮಾಜಿ ಸೈನಿಕ ಹಾಗೂ ಶೈಕ್ಷಣಿಕ ಸಲಹೆಗಾರ ಟಿ.ಜಿ.ಮ್ಯಾತ್ಯು ಅವರು ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ರಂಜಿಲಾಡಿ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿ ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರದ ಲಕ್ಷಣಗಳು ಹಾಗೂ ಇದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಹೇಳಿದರು.

ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಸೈಮನ್.ಕೆ.ಸಿ, ಶಾಲಾ ಶಿಕ್ಷಕ- ಶಿಕ್ಷಕೇತರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಜ್ಯೋತಿ ಎಸ್.ಕೆ ಸ್ವಾಗತಿಸಿದರು. ಪ್ರಭಾವತಿ ವಂದಿಸಿದರು. ಶ್ವೇತಾ ನಿರೂಪಿಸಿದರು.

Leave a Reply

error: Content is protected !!