ಚಾರ್ಮಾಡಿ: ತೀವ್ರ ಗಾಳಿ ಮಳೆಗೆ ಆಡಿಮಾರು ಎಂಬಲ್ಲಿ ಮನೆಗೆ ಬಿದ್ದ ಬೃಹತ್ ಗಾತ್ರದ ಮರ- ಶೌರ್ಯ ವಿಪತ್ತು ತಂಡದಿಂದ ತೆರವು ಕಾರ್ಯಾಚರಣೆ

ಶೇರ್ ಮಾಡಿ

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಆಡಿಮಾರು ಇಂದಿರಾ ಮೋಹನ್ ಇವರ ಮನೆಗೆ ಜು.13ರಂದು ರಾತ್ರಿ ಸುರಿದ ತೀವ್ರ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು, ನೆರಿಯ ಶೌರ್ಯ ವಿಪತ್ತು ಘಟಕದ ಸದಸ್ಯರ ಮೂಲಕ, ಅರಸಿನಮಕ್ಕಿ, ಉಜಿರೆ, ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು.

ಘಟನಾ ಸ್ಥಳಕ್ಕೆ ಅರಣ್ಯಧಿಕಾರಿ ನಾಗೇಶ್, ಗೋಪಾಲ್, ರವಿ ಅವರೊಂದಿಗೆ ಚರ್ಚಿಸಿ ಮನೆಗೆ ಬಿದ್ದ ಮರ ತೆರವುಗೊಳಿಸಲಾಯಿತು ಹಾಗೂ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಮನೆಗೆ ಸಿಮೆಂಟ್ ಶೀಟ್ ಹಾಗೂ ಸಿಮೆಂಟ್ ಕಂಬ ಒದಗಿಸಿ ಕೊಟ್ಟರು. ತುರ್ತು ಸ್ವಂದನ ತಂಡ ತಾತ್ಕಾಲಿಕ ಮನೆ ರಚನೆ ಮಾಡಿ ವಾಸ್ತವಕ್ಕೆ ಅನುಕೂಲ ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ತುರ್ತು ಸ್ಪಂದನಾ ತಂಡದ ಸ್ವಯಂ ಸೇವಕರಾದ ನೆರಿಯ ಘಟಕದ ಸ್ವಯಂ ಸೇವಕ ನಾಗೇಶ್ ಬಿ, ಸತೀಶ್.ಕೆ, ಅರಸಿನಮಕ್ಕಿ ಘಟಕದ ಅವಿನಾಶ್ ಭಿಡೆ, ಉಜಿರೆ ಘಟಕದ ಸ್ವಯಂ ಸೇವಕರಾದ ಸಚ್ಚಿನ್ ಭಿಡೆ, ಸಂದೇಶ್, ರವೀಂದ್ರ, ರಾಘವೇಂದ್ರ, ಸುಧೀರ್, ಸುಲೈಮಾನ್, ಅನಿಲ್ ಕುಮಾರ್, ಶಶಿ, ಅಶೋಕ್, ಸುಮಿತ್ರಾ ಇವರುಗಳು ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Leave a Reply

error: Content is protected !!