ನಡೆದಾಡಲು ಹರಸಾಹಸ ಪಡುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರುಹಳ್ಳಿಗೇರಿ-ಸೌತಡ್ಕ ಸಂಪರ್ಕಿಸುವ ರಸ್ತೆ ಸ್ಥಿತಿ ಅಯೋಮಯ
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಗೇರಿಯಾಗಿ ಸೌತಡ್ಕ ಸಂಪರ್ಕಿಸುವ ಈ ರಸ್ತೆಯು ಕೆಸರುಮಯವಾಗಿದ್ದು ಸಂಚರಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ.
ಬಯಲು ಆಲಯ ಗಣಪನೆಂದು ಪ್ರತಿಷ್ಠೆ ಪಡೆದ ಶ್ರೀ ಕ್ಷೇತ್ರ ಸೌತಡ್ಕ, ಕೊಕ್ಕಡ, ಹಳ್ಳಿಗೇರಿ, ಮಲ್ಲಿಗೆಮಜಲು ಗಳಿಗೆ ಸಂಪರ್ಕ ಕಲ್ಪಿಸಿಕೊಡುವ ಅತಿ ಹತ್ತಿರ ಬಹು ಮುಖ್ಯರಸ್ತೆ ಇದಾಗಿದ್ದು. ಇದೀಗ ಅಲ್ಲಲ್ಲಿ ಸಂಪೂರ್ಣ ಕೆಸರುಮಯವಾಗಿದ್ದು ಸಂಚರಿಸಲು ಯೋಗ್ಯವಾಗದ ರೀತಿಯಲ್ಲಿ ನಿರ್ಮಾಣಗೊಂಡಿದೆ.
ಇದರಿಂದಾಗಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಇದು ಕಂಟಕವಾಗಿದೆ. ಆಡಳಿತ ವರ್ಗದವರು ಇತ್ತ ಗಮನಹರಿಸಬೇಕೆಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ.
“ರಸ್ತೆ ಇಕ್ಕೆಲಗಳಲ್ಲಿ ಈ ಹಿಂದೆ ನೀರು ಹರಿಯುತ್ತಿದ್ದ ಆ ಭಾಗದ ಚರಂಡಿಗಳನ್ನು ಬಂದ್ ಮಾಡಿರುವುದರಿಂದ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹೋಗುವುದರಿಂದ ಈ ಅನಾಹುತ ಆಗುತ್ತಿದೆ ಎಂಬುದಾಗಿ ಸಾರ್ವಜನಿಕರ ದೂರಾಗಿದೆ”