ನೆಲ್ಯಾಡಿ: ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಸೇವ್ ಅವರ್ ಪ್ಲಾನೆಟ್” ಕಾರ್ಯಕ್ರಮದಡಿ ವನಮಹೋತ್ಸವ ಸಪ್ತಾಹ ಜು.5 ರಿಂದ ಜು.11ರ ವರೆಗೆ ನೆಲ್ಯಾಡಿ ಸುತ್ತು ಮುತ್ತಲಿನ ಪ್ರದೇಶಗಳಲ್ಲಿ ವಿವಿಜ ಜಾತಿಯ ಗಿಡಗಳನ್ನು ನೀಡುವುದರ ಮೂಲಕ ಆಚರಿಸಲಾಯಿತು.
ನೆಲ್ಯಾಡಿ ಪರಿಸರದ ಸರಕಾರಿ ಶಾಲೆಗಳಾದ ಹೊಸಮಜಲು, ಗೋಳಿತಟ್ಟು, ಪಡುಬೆಟ್ಟು, ಆಲಂತಾಯ, ಶಾಂತಿನಗರ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನೆಲ್ಯಾಡಿ- ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ವಿವಿಧ ಜಾತಿಯ ಹಲಸು, ಮಾವು, ಬಟರ್ ಫ್ರೂಟ್ಸ್, ಚೆರಿ, ದಾಲಾರಿ ಚಪ್ಪ ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ನ ಅಧ್ಯಕ್ಷ ಶೀನಪ್ಪ.ಎಸ್ ವಹಿಸಿ ಪರಿಸರದ ಉಳಿವಿಗಾಗಿ, ಮನುಷ್ಯನ ಆರೋಗ್ಯದ ದೃಷ್ಟಿಯಿಂದ ವಿವಿಧ ಕಡೆಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ. ಇದೇ ರೀತಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಾಗೂ ಪರಿಸರದಲ್ಲಿ ಗಿಡವನ್ನು ನೆಟ್ಟು ಪರಿಸರ ಉಳಿಸುವಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಈ ಸಂದರ್ಭದಲ್ಲಿ ನುಡಿದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲಿಜನ್ ನ ಪೂರ್ವಾಧ್ಯಕ್ಷರಾದ ಸದಾನಂದ ಕುಂದರ್, ಅರ್.ವೆಂಕಟರಮಣ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅರ್ಚಕರು, ವಿವಿಧ ಶಾಲೆಯ ಮುಖ್ಯ ಶಿಕ್ಷಕ- ಶಿಕ್ಷಕಿಯರು, ವಿದ್ಯಾರ್ಥಿಗಳು, ಶಿಕ್ಷಕರ ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ಭಾಗವಹಿಸಿದರು.
ಕೋಶಾಧಿಕಾರಿ ಪ್ರಕಾಶ್.ಕೆ.ವೈ ಸಹಕರಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್.ಡಿ ವಂದಿಸಿದರು.