ನೆಲ್ಯಾಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲ್ಯಾಡಿ ಮತ್ತು ಕೌಕ್ರಾಡಿ ಗ್ರಾಮಗಳ ಪ್ರಮುಖ ದೇವಸ್ಥಾನಗಳ ಸುತ್ತ ನೀರು ಆವರಿಸಿದ ಘಟನೆ ಬುಧವಾರ ನಡೆದಿದೆ.
ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೌಕ್ರಾಡಿ ಗ್ರಾಮದ ಇಚ್ಚಿಲಂಪಾಡಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಉಳ್ಳಾಕ್ಲು ದೈವಸ್ಥಾನದ ಸುತ್ತ ನೀರು ಆವರಿಸಿದೆ.
ಸಂಪರ್ಕ ರಸ್ತೆ ಬಂದು, ತೋಟಗಳಿಗೆ ನುಗ್ಗಿದ ನೀರು:
ಕೌಕ್ರಾಡಿ ಗ್ರಾಮದ ಇಚ್ಚಿಲಂಪಾಡಿ ಸಮೀಪದ ಮಾನಡ್ಕ- ಮುಡಿಪು ಸಂಪರ್ಕಿಸುವ ದೇರಾಜೆ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದು ಪರಿಸರದ ಹಲವು ಕೃಷಿ ತೋಟಗಳಿಗೆ ನೀರು ನುಗ್ಗಿದೆ.
ಗುಂಡ್ಯ ಸಮೀಪದ ಕೆಂಪು ಹೊಳೆ ಎಂಬಲ್ಲಿ ಇರುವ ಡ್ಯಾಮ್ ನ ನೀರನ್ನು ಏಕಾಏಕಿಯಾಗಿ ಹೊರಬಿಟ್ಟ ಕಾರಣ ನೀರು ಇಚ್ಚಿಲಂಪಾಡಿ ಸಮೀಪದ ಗುಂಡಿಹೊಳೆಯಲ್ಲಿ ನೀರು ಹೆಚ್ಚಾಗಿ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಸ್ಥಳಕ್ಕೆ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಉಪತಹಶೀಲ್ದಾರ್ ಗೋಪಾಲ್.ಕೆ, ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಲೋಕೇಶ್ ಬಾಣಜಾಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.