ನೆಲ್ಯಾಡಿ:ದ.ಕ.ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಪುತ್ತೂರು, ರೈತ ಸಂಪರ್ಕ ಕೇಂದ್ರ ಉಪ್ಪಿನಂಗಡಿ ಹೋಬಳಿ ಇದರ ವತಿಯಿಂದ ಮಣ್ಣು ಪರೀಕ್ಷೆಯ ಅವಶ್ಯಕತೆ ಹಾಗೂ ವಿಧಾನದ ಕುರಿತು ಮಾಹಿತಿ ಮತ್ತು ಮಣ್ಣು ಆರೋಗ್ಯ ಚೀಟಿ ವಿತರಣಾ ಕಾರ್ಯಕ್ರಮ ಜು.18ರಂದು ನೆಲ್ಯಾಡಿ ಗ್ರಾಮ ಪಂಚಾಯಿತಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜೇನು ಕೃಷಿ ಹಾಗೂ ಬಿದಿರು ಕೃಷಿಯ ಬಗ್ಗೆ ರೈತೋತ್ಪಾದಕರ ಕಂಪನಿಯ ವ್ಯವಸ್ಥಾಪಕರಾದ ರಾಜೇಶ್.ಎಸ್, ಮಣ್ಣು ಮಾದರಿ ಸಂಗ್ರಹಣೆ ಮಾಡುವ ವಿಧಾನ ಹಾಗೂ ಅದರ ವಿಶ್ಲೇಷಣೆ ಮತ್ತು ಅದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಪುತ್ತೂರು ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೆ, ಸಮಗ್ರ ಕೃಷಿಯ ಬಗ್ಗೆ ವಿಠಲ.ರೈ ಅವರು ಮಾಹಿತಿಯನ್ನು ನೀಡಿದರು.
ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾ ಉಪಸ್ಥಿತರಿದ್ದರು.
ಪಂಚಾಯಿತಿ ಸದಸ್ಯರು, ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಪ್ಪಿನಂಗಡಿ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ತಿರುಪತಿ ಬರಮಣ್ಣವರ್ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಿ.ಸಾಯಿನಾಥ್ ವಂದಿಸಿದರು.