ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜುನ ಎನ್ನೆಸ್ಸೆಸ್ ಘಟಕದ ಸ್ವಯಂಸೇವಕರಿಗೆ ಜು.27 ರಂದು ಪುನಶ್ಚೇತನ, ನಾಯಕತ್ವ ತರಬೇತಿ ಮತ್ತು ಕಾನೂನು ಅರಿವು ಕಾರ್ಯಗಾರವನ್ನು ನಡೆಸಲಾಯಿತು.
ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ದೀಪ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರಿಗೆ ನಾನಾ ರೀತಿಯ ತರಬೇತಿಗಳು ದೊರಕುವುದರಿಂದ ಸಮಾಜದಲ್ಲಿ ಉತ್ತಮ ರೀತಿಯ ಜೀವನವನ್ನು ನಡೆಸಲು ಸಾಧ್ಯವಾಗುವುದು ಎಂದು ಅವರು ನುಡಿದರು.
ನೆಲ್ಯಾಡಿ ಜೆಸಿಐ ಸಂಸ್ಥೆಯ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್ ಅವರು ಮಾತನಾಡುತ್ತಾ ಎನ್ನೆಸ್ಸೆಸ್ ಘಟಕ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ನುಡಿದರು. ನೆಲ್ಯಾಡಿಯ ಪ್ರಸಿದ್ಧ ನೋಟರಿ ವಕೀಲ ಇಸ್ಮಾಯಿಲ್ ಎನ್ ಅವರು ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಕಾನೂನು ಅರಿವು ಕಾರ್ಯಗಾರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಹಾಗೂ ಇನ್ನಿತರ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಂಸ್ಥೆಯ ಸಂಚಾಲಕರೆ.ಫಾ.ನೋಮಿಸ್ ಕುರಿಯಾಕೋಸ್ ಅವರು ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಮ್.ಕೆ, ಎನ್ನೆಸ್ಸೆಸ್ ಘಟಕ ನಾಯಕ ಆಶ್ಲೇಷ್ ಕುಮಾರ್, ನಾಯಕಿ ದೀಕ್ಷಿತ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ.ಶೆಟ್ಟಿ.ಕೆ ಸ್ವಾಗತಿಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ಗೋಪಿಕ ವಂದನೆ ಗೈದರು. ಕಾರ್ಯಕ್ರಮದಲ್ಲಿ ಜೆ.ಸಿ.ವಿನ್ಯಾಸ್, ಎನ್ನೆಸ್ಸೆಸ್ ಸ್ವಯಂಸೇವಕರು, ಉಪನ್ಯಾಸಕರು ಭಾಗವಹಿಸಿದರು.