ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿಶ್ವ ಮಳೆಯ ದಿನದ ಅಂಗವಾಗಿ ರಾ.ಸೇ.ಯೋಜನೆಯ ಸ್ವಯಂ ಸೇವಕರು ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಕಾರ್ಯಕ್ರಮಾಧಿಕಾರಿ ಪದ್ಮಶ್ರೀ ರಕ್ಷಿತ್ ಅವರ ಮಾರ್ಗದರ್ಶನದಲ್ಲಿ ಕಾಲೇಜು ಹಾಗೂ ಉಜಿರೆ ಪರಿಸರದಲ್ಲಿ ಕೊಡೆಯ ಮಹತ್ತ್ವ ಸಾರುವ ‘ಕೊಡೆ ನಾ ನಿನ್ನ ಬಿಡೆ’ ಎಂಬ ವಿಶೇಷ ಅಭಿಯಾನ ನಡೆಸಿದರು.
ಕಾವೇರಿ ತಂಡದ ಪ್ರಾಪ್ತಿ ಗೌಡ, ಶಶಾಂಕ್, ಅನೀಶ್, ಚಂದನಾ, ತ್ರಿಶಾ ಮುಂತಾದ ಸ್ವಯಂ ಸೇವಕರು ಇಲ್ಲಿನ ಮಳೆಯ ಬಗ್ಗೆ ಹಾಗೂ ಕೊಡೆಯ ಉಪಯೋಗದ ಬಗ್ಗೆ ಅಭಿಯಾನ ನಡೆಸಿದರು. ನಾಯಕರಾದ ಆದಿತ್ಯ ಹಾಗೂ ಪ್ರಾಪ್ತಿ ಉಪಸ್ಥಿತರಿದ್ದರು.