ಕೊಕ್ಕಡ: ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿ; ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ: ಮನೆಯವರನ್ನು ಸ್ಥಳಾಂತರಿಸುವಂತೆ ಸೂಚನೆ

ಶೇರ್ ಮಾಡಿ

ಕೊಕ್ಕಡ: ಭಾರಿ ಮಳೆಯಿಂದಾಗಿ ಕೊಕ್ಕಡ ಗ್ರಾಮದ ಬಲಿಪಗುಡ್ಡೆ ಸುಶೀಲ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು ಆ.2ರಂದು ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ ನೀಡಿ ಶೀಘ್ರವಾಗಿ ಅವರನ್ನು ಸ್ಥಳಾಂತರಿಸಲು ಹಾಗೂ ದುರಸ್ತಿ ಮಾಡಿ ಕೊಡುವಂತೆ ತಿಳಿಸಲಾಯಿತು.

ಈ ವೇಳೆ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಗ್ರಾ.ಪಂ ನಿಕಟಪೂರ್ವಾಧ್ಯಕ್ಷ ಯೋಗೀಶ್ ಆಳಂಬಿಲ, ಉಪಾಧ್ಯಕ್ಷ ಪ್ರಭಾಕರ ಗೌಡ, ಪಿಡಿಒ ದೀಪಕ್ ರಾಜ್, ಜಯಾನಂದ ಗೌಡ, ಗ್ರಾ.ಪಂ.ಸದಸ್ಯರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

error: Content is protected !!