ಕೊಕ್ಕಡ: ಶಿಬಾಜೆ ಗ್ರಾಮದ ಪೊಸೋಡಿ-ಬಂಗೇರಡ್ಕ ರಸ್ತೆಯು ಗ್ರಾಮ ಪಂಚಾಯಿತಿ ಗೆ ಸೇರಿದ ರಸ್ತೆಯಾಗಿದ್ದು ದುರಸ್ತಿಗೊಳ್ಳದೆ ಹಲವು ವರ್ಷಗಳೇ ಕಳೆದಿದೆ. ಕಾಡು ದಾರಿಯಲ್ಲಿರುವ ಈ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲದೆ ನೀರು ಮಾರ್ಗದಲ್ಲೆ ಹರಿದು ರಸ್ತೆಯ ಕೆಲವು ಭಾಗದ ಮಣ್ಣು ಕೊಚ್ಚಿಕೊಂಡು ಬಂದು ಇನ್ನೊಂದು ಭಾಗದಲ್ಲಿ ನಿಂತು ಕೆಸರು ಗದ್ದೆಯoತಾಗಿದೆ.
ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಪ್ರಯಾಣಿಸಲು ಹರಸಾಹಸ ಪಡುವಂತಾಗಿದೆ. ಇದು ಕಾಡಿನ ಮಧ್ಯೆ ಇರುವ ರಸ್ತೆಯಾಗಿರುವುದರಿಂದ ನೀರಿನ ಹರಿಯು ಹೆಚ್ಚಾಗಿದೆ. ರಸ್ತೆ ದುರಸ್ತಿಗೊಳಿಸುವುದರೊಂದಿಗೆ ನಾಲ್ಕು ಮೋರಿಗಳ ಅಳವಡಿಕೆ ಈ ಪ್ರದೇಶದಲ್ಲಿ ಅವಶ್ಯವಿದೆ.
ಅತಿ ಶೀಘ್ರದಲ್ಲಿ ಮೋರಿ ಅಳವಡಿಸಿ ರಸ್ತೆ ದುರಸ್ತಿಗೊಳಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.