ಕಡಬ: ಹಠಾತ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿ ಆಸ್ಪತ್ರೆಯಲ್ಲಿ ನಿಧನ

ಶೇರ್ ಮಾಡಿ

ಕಡಬ ತಾಲೂಕು ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ.

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಈತ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದ ಎಂದು ತಿಳಿದು ಬಂದಿದೆ.

ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ಈತ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದ್ದು ಜೊತೆಗಿದ್ದ ಸ್ನೇಹಿತರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಲೇಜಿಗೆ ತಂದು ಅಂತಿಮ ದರ್ಶನಕ್ಕಿಡಲಾಗಿತ್ತು ಎಂದು ತಿಳಿದು ಬಂದಿದೆ.

Leave a Reply

error: Content is protected !!