ಶಿರಾಡಿ: ಕೆಸರುಮಯಗೊಂಡಿರುವ ರಸ್ತೆ-ಕಾಂಕ್ರಿಟೀಕರಣಕ್ಕೆ ಮನವಿ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಪದಂಬಳ, ಮೇಲ್ತಟ್ಟ, ಕುನ್ನುಂ ಪುರಂ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ಅಲ್ಲಿನ ನಿವಾಸಿಗಳು ಶಿರಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ಶಿರಾಡಿ ಗ್ರಾಮದ ಪದಂಬಳ, ಮೇಲ್ತಟ್ಟ, ಕುನ್ನುಂಪುರಂ ಪ್ರದೇಶಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆ ಇದಾಗಿದ್ದು 1985ರಿಂದ ಅಸ್ತಿತ್ವದಲ್ಲಿದೆ. ಈ ಪ್ರದೇಶದಲ್ಲಿ ಸುಮಾರು 35 ಕುಟುಂಬಗಳೂ ವಾಸ್ತವ್ಯವಿದ್ದಾರೆ. ಈ ಸಂಪರ್ಕ ರಸ್ತೆಯು ಶಿರಾಡಿ ಶಿರ್ವತಡ್ಕ ಪದಂಬಳದಿಂದ ದೇವರಮಾರಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಗೆ ಶಿರ್ವತಡ್ಕ ಪದಂಬಳ ಹೊಳೆಯು ಪದಂಬಳದಲ್ಲಿ ಅಡ್ಡ ಬರುವುದರಿಂದ ರಸ್ತೆಯ ಸಂಪರ್ಕ ಕಡಿತಗೊಳ್ಳುತ್ತಿದೆ. ಮಳೆಗಾಲದಲ್ಲಿ ರಸ್ತೆಯ ಉದ್ದಕ್ಕೂ ಒರತೆ ಇರುವುದರಿಂದ ಶಾಲಾ ಮಕ್ಕಳು ಕೆಸರಿನಲ್ಲಿ ನಡೆದಾಡುವ ದುಸ್ಥಿತಿ ಒದಗಿದೆ. ರೋಗಿಗಳನ್ನೂ ಆಸ್ಪತ್ರೆಗೆ ಕೊಂಡೊಯ್ಯಲು ವಾಹನ ಸಂಚಾರವೂ ಕಷ್ಟವಾಗಿದೆ. ಆದ್ದರಿಂದ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

error: Content is protected !!