
ನೆಲ್ಯಾಡಿ: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್‍ಸ್ಟೇಬಲ್ ಆಗಿದ್ದ ಕುಶಾಲಪ್ಪ ನಾಯ್ಕ ಅವರು ಎಎಸ್ಐ ಆಗಿ ಭಡ್ತಿ ಹೊಂದಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ವರ್ಗಾವಣೆ.
1996ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಪೊಲೀಸ್ ಕಾನ್‍ಸ್ಟೇಬಲ್ ಆಗಿ ಸೇರ್ಪಡೆಗೊಂಡ ಕುಶಾಲಪ್ಪ ನಾಯ್ಕ ಅವರು ಸುಮಾರು 19 ವರ್ಷಗಳ ಕಾಲ ಮಂಗಳೂರು, ಉಪ್ಪಿನಂಗಡಿ, ಪುತ್ತೂರು ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಹೆಡ್‍ಕಾನ್‍ಸ್ಟೇಬಲ್ ಆಗಿ ಭಡ್ತಿ ಹೊಂದಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಸೇರಿದಂತೆ ಉಪ್ಪಿನಂಗಡಿ, ನೆಲ್ಯಾಡಿ ಗಳಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಎಎಸ್ಐ ಆಗಿ ಭಡ್ತಿ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿರುತ್ತಾರೆ.






