ನೆಲ್ಯಾಡಿ: ನೆಲ್ಯಾಡಿ ಸಮೀಪದ ಬಲ್ಯ ರಸ್ತೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸುಮಾರು 10 ಗಂಟೆಯ ವರೆಗೆ ರಸ್ತೆಯಲ್ಲಿ ಸಂಚರಿಸಿದ ಕಾಡಾನೆ ವಾಹನ ಸವಾರರು ಸಾರ್ವಜನಿಕರು ಸಂಚರಿಸಲು ಪರದಾಡಿದ ಘಟನೆಯು ಕೂಡ ನಡೆಯಿತು.
ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ಹಾದುಹೋದ ಬಲ್ಯ ರಸ್ತೆಯಲ್ಲಿ ಕಾಡಾನೆಯೊಂದು ಸಂಚರಿಸಿ ಸಮೀಪದ ಇಬ್ರಾಹಿಂ.ಎಂ.ಕೆ, ವಿಶ್ವನಾಥ ಶೆಟ್ಟಿ, ಶೀನಪ್ಪ ಎಂಬವರ ಕೃಷಿ ತೋಟಗಳಿಗೆ ನುಗ್ಗಿ ಬಾಳೆ, ತೆಂಗು, ಅಡಿಕೆ ಕೃಷಿಗಳನ್ನು ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ ಘಟನೆ ನಡೆದಿದೆ.
ಸ್ಥಳಕ್ಕೆ ಕೌಕ್ರಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಲೋಕೇಶ್ ಬಾಣಜಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಪರೀತ ಮಳೆಯಿಂದಾಗಿ ಆನೆ ಕಂದಕಗಳು ಹಾನಿಯಾಗಿದ್ದು ಆನೆಗಳಿಗೆ ಸಂಚರಿಸಲು ಇದರಿಂದ ಅನುಕೂಲವಾಗಿದೆ. ಜನನಿಬಿಡ ಪ್ರದೇಶದಲ್ಲಿ ಆನೆ ಸಂಚರಿಸುವುದರಿಂದ ಪ್ರಾಣ ಹಾನಿಯಾಗುವ ಸಂಭವ ಅತಿ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮವಹಿಸಬೇಕೆಂದು ಕೌಕ್ರಾಡಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಇಬ್ರಾಹಿಂ.ಎಂ.ಕೆ ಆಗ್ರಹಿಸಿದ್ದಾರೆ.