ನೆಲ್ಯಾಡಿ:ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ

ಶೇರ್ ಮಾಡಿ

ನೇಸರ ಫೆ.23: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಹಾಗೂ ಓರಿಯಂಟೇಷನ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷೀಯ ಮಾತನಾಡಿದ ವಿಶ್ವವಿದ್ಯಾನಿಲಯ ಕಾಲೇಜಿನ ಸಂಯೋಜಕರಾದ ಡಾ.ಜಯರಾಜ್.ಎನ್ ರಾಜ್ಯ ಯುವ ಘಟಕದ ಸ್ಥಾಪನೆ ಮತ್ತು ಅದರ ಸದಸ್ಯರಾಗಿ ಘಟಕ ಯೋಜನೆಗಳ ಮೂಲಕ ನಿಮ್ಮಲ್ಲಿರುವ ಸೇವಾ ಮನೋಭಾವ ನಾಯಕತ್ವ ಗುಣಗಳ ಮೂಲಕ ಸಮಾಜದಲ್ಲಿ ಆರೋಗ್ಯ ಮತ್ತು ಸೇವೆಯ ಕುರಿತು ಜನಜಾಗೃತಿ ಉಂಟು ಮಾಡಲು ಸಲಹೆ ನೀಡಿದರು.ಯುವ ಸಮುದಾಯದ ಪ್ರತಿನಿಧಿಗಳಾದ ವಿದ್ಯಾರ್ಥಿಗಳು ಇಂತಹ ಜಾಗೃತಿಕ ಸಂಸ್ಥೆಯೊಂದರ ಸದಸ್ಯರಾಗುವ ಮೂಲಕ ವಿಶ್ವಮಾನವರಾಗಲು ಪ್ರಯತ್ನಿಸಬೇಕು.ನಿರ್ವಹಣೆ ಮತ್ತು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಜ್ಞಾನ ಹೊಂದಿ ಸಮುದಾಯ ಮತ್ತು ಪ್ರಕೃತಿ ರಕ್ಷಣೆಯಲ್ಲಿ ಕ್ರಿಯಾಶೀಲರಾಗಿರಬೇಕು ಎಂದು ಸಲಹೆ ನೀಡಿದರು
.

ಸದ್ಭಾವನಾ ಸಮಾವೇಶ: ವೀಕ್ಷಿಸಿ Subscribers ಮಾಡಿ

ಸಂಪನ್ಮೂಲ ವ್ಯಕ್ತಿಯಾದ ಉಪನ್ಯಾಸಕಿ ಹಾಗೂ ಸುಳ್ಯ ಯುವ ರೆಡ್ ಕ್ರಾಸ್ ಘಟಕದ ಪ್ರಧಾನ ಕಾರ್ಯದರ್ಶಿಯಾದ ಡಾ.ಅನುರಾಧಾ ಕುರುಂಜಿ ಅವರು ಮಾತನಾಡಿ ಜೀವದಯೆ ಮತ್ತು ಮಾನವೀಯತೆಯ ನೆಲೆಗಳಿಂದ ಜಗತ್ತಿನಲ್ಲಿ ಶಾಂತಿ,ಸಾರತ್ವ,ಸ್ವಯಂ ಸೇವೆಯ ಮೂಲಕ ರೆಡ್ ಕ್ರಾಸ್ ಸಂಸ್ಥೆಯು ಜಗತ್ತಿಗೆ ಮಾದರಿಯಾಗಿದೆ.ಶಾಂತಿಗಾಗಿ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದ ರೆಡ್ ಕ್ರಾಸ್ ಸಂಸ್ಥೆಯ ಭಾಗವಾಗಿ ಸ್ವಯಂ ಆಸಕ್ತಿಯಿಂದ ಸದಸ್ಯರಾಗುವ ಮೂಲಕ ನಾಗರಿಕ ಸಮಾಜದ ಆರೋಗ್ಯ ಮತ್ತು ಇನ್ನಿತರ ಸೇವೆಗಳನ್ನು ಮಾಡಲು ನೀವೆಲ್ಲ ಮುಂದೆ ಬಂದಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ವಿದ್ಯಾರ್ಥಿಗಳನ್ನು ಕುರಿತು ಪ್ರಶಂಸಿಸಿದರು.ರೆಡ್ ಕ್ರಾಸ್ ನ 7 ಮೂಲಭೂತ ತತ್ವಗಳಾದ ಮಾನವೀಯತೆ, ಸ್ವಯಂಸೇವೆ, ಪಕ್ಷಪಾತ, ಸಾಹಿತ್ಯ, ಸ್ವಾತಂತ್ರ್ಯ, ಏಕತೆ ಮತ್ತು ವಿಶ್ವ ವ್ಯಾಪಕತೆ ಎಂಬ ಅಂಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಈ ತತ್ವಗಳನ್ನು ಕಾರ್ಯರೂಪಕ್ಕಿಳಿಸಲು ಕರೆನೀಡಿದರು. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಮಯಪ್ರಜ್ಞೆ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಬಗ್ಗೆ ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ಯುವ ರೆಡ್ ಕ್ರಾಸ್ ಘಟಕದ ಮಹತ್ವ ತಿಳಿಸಿಕೊಟ್ಟರು.

ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ.ನೂರಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.ವಿದ್ಯಾರ್ಥಿನಿ ವೀಣಾ ಮತ್ತು ತಂಡ ಪ್ರಾರ್ಥನೆ ನಡೆಸಿಕೊಟ್ಟರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ವೆರೊಣಿಕಾ ಪ್ರಭಾ ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಶ್ರೀ ವಂದಿಸಿದರು. ವಿದ್ಯಾರ್ಥಿ ಮಹಮ್ಮದ್ ಲುಕ್ಮಾನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

error: Content is protected !!