ಕೊಕ್ಕಡ: ಬೆಂಗಳೂರು ಸೆಲ್ಕೋ ಫೌಂಡೇಶನ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಇದರ ಯೋಜನೆಯಡಿಯಲ್ಲಿ ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಅ.12 ರಂದು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಗುರುಪ್ರಕಾಶ್ ಶೆಟ್ಟಿ ಸಾಂಕೇತಿಕವಾಗಿ ಸೋಲಾರ್ ಪೆನಲ್ ಅನ್ನು ಸಂಸ್ಥೆಯ ಅಧ್ಯಕ್ಷ ಸ್ವರ್ಣಗೌರಿ ಅವರಿಗೆ ಹಸ್ತಾಂತರಿಸಿದರು.
ಗುರುಪ್ರಕಾಶ್ ಶೆಟ್ಟಿ ಇವರು ಬಡ ಜನರನ್ನು ತಲುಪುವಲ್ಲಿ ಸೆಲ್ಕೋ ಮಹತ್ವದ ಪಾತ್ರವನ್ನು ಹೊಂದಿದೆ. ಸೋಲಾರ್ ಅನ್ನು ಜೀವನೋಪಾಯದ ಕಡೆಗೆ ವಿಸ್ತರಿಸುವ ಬಗ್ಗೆ ಉದ್ದೇಶವನ್ನು ಹೊಂದಿದ್ದು 18 ಜೀವನೋಪಾಯದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ ಮತ್ತು ಎಲ್ಲಾ ದಿವ್ಯಾಂಗರು ಇದರ ಸದುಪಯೋಗವನ್ನು ಪಡೆದುಕೊಂಡು ನೆಮ್ಮದಿಯ ಬಾಳನ್ನು ಬದುಕು ಬೇಕು ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ|ಸಂದೇಶ್ ಕುಮಾರ್ ರಾವ್, ಕೊಕ್ಕಡ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್, ಸೆಲ್ಕೋ ಏರಿಯಾ ಮ್ಯಾನೇಜರ್ ಸಂಜಿತ್.ರೈ ಮತ್ತು ಬೆಳ್ತಂಗಡಿಯ ಬ್ರಾಂಚ್ ಮ್ಯಾನೇಜರ್ ನವೀನ್ ಕುಮಾರ್.ಜಿ ಹಾಗೂ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ಶಾಂತಾ.ಪಿ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೆಲ್ಕೋ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಗುರುಪ್ರಕಾಶ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿಯಾಗಿರುವ ರೊ.ಸಂದೇಶ್ ರಾವ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಯ 25ಮಂದಿ ಅರ್ಹ ಫಲಾನುಭವಿಗಳಿಗೆ 1 ಫ್ಯಾನ್, 1 ಬಲ್ಬ್, 2 ಸೋಲಾರ್ ಪೆನಾಲ್, 2ಬ್ಯಾಟರಿ ಮತ್ತು ಇನ್ವರ್ಟರ್ ತಲಾ ರೂ. 65,000/- ಮೊತ್ತದ ಸೋಲಾರ್ ಕಿಟ್ ಗಳನ್ನು ಫಲಾನುಭವಿಗಳ ಮನೆಗಳಲ್ಲಿ ಅಳವಡಿಸಲಾಗಿದೆ.
ಸೇವಾಧಾಮ ಸಂಸ್ಥಾಪಕರಾದ ಕೆ.ವಿನಾಯಕ ರಾವ್ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾಕ್ಯುಮೆಂಟೇಶನ್ ಮಾನಿಟರಿಂಗ್ ಮತ್ತು ಇವಲ್ಯೂಟಿಂಗ್ ಸಂಯೋಜಕರಾದ ಕು.ಸುಮ ನಿರೂಪಿಸಿ, ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ಧನ್ಯವಾದವಿತ್ತರು.