ಕಡಬದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶೇರ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ವಲಯದ ಸಹಯೋಗದೊಂದಿಗೆ ಸರಸ್ವತಿ ವಿದ್ಯಾಲಯ ಪ್ರೌಢ ಶಾಲೆ ಕಡಬದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಆಶಯಗಳ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಜೆಸಿಐ ಕಡಬದ ತರಬೇತುದಾರ ಪ್ರದೀಪ್ ಬಾಕಿಲರವರು ವ್ಯಸನದ ಚಟದಿಂದ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉಂಟಾಗುವ ಅನಾಹುತಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳು ಸಂಸ್ಕಾರ ಜೀವನ ನಡೆಸಲು ಪೂರಕವಾಗಿ ತಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಆದರ್ಶಗಳ ಬಗ್ಗೆ ತಿಳಿಸಿದರು.

ಸರಸ್ವತಿ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಶೈಲಾಶ್ರೀ.ರೈ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕೆಂದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಕಡಬ ವಲಯದ ಜನಜಾಗೃತಿ ವೇದಿಕೆಯ ಸದಸ್ಯರಾದ ಪಿ.ವೈ.ಕುಸುಮ, ಕಡಬ ಒಕ್ಕೂಟದ ಅಧ್ಯಕ್ಷ ನಳಿನಿ.ರೈ ಉಪಸ್ಥಿತರಿದ್ದರು.

ಕಡಬ ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಪ್ರಸ್ತಾವಿಕವಾಗಿ ಮಾತಾಡಿದರು, ಸೇವಾಪ್ರತಿನಿಧಿಯಾದ ನಳಿನಿ ಸ್ವಾಗತಿಸಿದರು, ಸುಗುಣ ವಂದಿಸಿದರು, ಕಾರ್ಯಕ್ರಮವನ್ನು ಸೌಮ್ಯ.ಕೆ ನಿರ್ವಹಿಸಿದರು.

Leave a Reply

error: Content is protected !!