ಪೌಷ್ಟಿಕ ಆಹಾರ ಪ್ರಾತ್ಯಕ್ಷಿ ಹಾಗೂ ಮಾಹಿತಿ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ಇದರ ವತಿಯಿಂದ ಕೌಕ್ರಾಡಿ ಗ್ರಾಮ ಪಂಚಾಯಿತಿನ ಸಭಾಂಗಣದಲ್ಲಿ ಕೌಕ್ರಾಡಿ ಧರ್ಮಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಪೌಷ್ಟಿಕ ಆಹಾರ ಪ್ರಾತ್ಯಕ್ಷಿ ಹಾಗೂ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು.

ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯೆ ಭಾರತಿಯವರು ವಹಿಸಿದರು, ನೆಲ್ಯಾಡಿ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಲೀಲಾ ಅವರು ಪೌಷ್ಟಿಕ ಆಹಾರದ ಸೇವನೆಯಿಂದ ಪ್ರಯೋಜನಗಳು ನಮ್ಮ ದೇಹಕ್ಕೆ ಬೇಕಾದಂತ ಪೋಷಕಾಂಶಗಳು ಸಿಗುವಂತ ಆಹಾರಗಳು ದ್ವಿದಳ ಧಾನ್ಯಗಳು, ಸೊಪ್ಪು ತರಕಾರಿಗಳ ಸೇವನೆ ಬಗ್ಗೆ ಮತ್ತು ಅಪೌಷ್ಟಿಕತೆಯಿಂದ ಆಗುವ ದುಷ್ಪರಿಣಾಮಗಳು ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಉಪಸ್ಥಿತದರು. ಜ್ಞಾನವಿಕಾಸ ಕೇಂದ್ರದ ಮೂಲಕ ಸದಸ್ಯರು ಪಡಕೊಂಡ ಪ್ರಯೋಜನಗಳ ಬಗ್ಗೆ ವಿವರಿಸಿದರು. ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಕ ಮಾತುಗಳ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮದ ಸದುದ್ದೇಶ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ವಿಶೇಷತೆ
ಪೌಷ್ಟಿಕ ಆಹಾರ ತಯಾರಿಕ ವಸ್ತುಗಳು ಹಾಗೂ ಔಷಧೀಯ ಸಸ್ಯಗಳನ್ನು ತಂದು ಪರಿಚಯಿಸಿ ಅದರಿಂದ ತಯಾರಿಸಲ್ಪಡುವಂತ ಪದಾರ್ಥಗಳು ಮತ್ತು ಅದರಿಂದಾಗುವಂತ ಪ್ರಯೋಜನಗಳ ಬಗ್ಗೆ ತಿಳಿಸಿದರು

ಕೇಂದ್ರದ ಸದಸ್ಯರು ರಚಿಸಿದ ನವಧಾನ್ಯಗಳ ರಂಗೋಲಿಯು ಸದಸ್ಯರನ್ನು ಆಕರ್ಷಿಸುತ್ತಿತ್ತು.

ಜ್ಞಾನವಿಕಾಸ ಕೇಂದ್ರದ ಸದಸ್ಯರು ಮೊಳಕೆ ಕಾಳು ಪಚಡಿ ಮತ್ತು ಆಟಿ ನನ್ನಿಯರಿ ಪ್ರಾತ್ಯಕ್ಷತೆಯ ಮೂಲಕ ತಯಾರಿಸಿದರು.

ಕೇಂದ್ರದ ಸದಸ್ಯರಿಂದ ಕುಣಿತ ಭಜನಾ ಕಾರ್ಯಕ್ರಮವು ನಡೆಯಿತು.

Leave a Reply

error: Content is protected !!