
ನೇಸರ ಫೆ .23:550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ಮಲಯಾಳಂ ಚಲನಚಿತ್ರ ಮತ್ತು ರಂಗಭೂಮಿ ನಟಿ ಕೆಪಿಎಸಿ ಲಲಿತಾ 22.02.2022 ಮಂಗಳವಾರ ರಾತ್ರಿ ಕೇರಳದ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ ಕೆಲವು ತಿಂಗಳುಗಳಿಂದ ಯಕೃತ್ತು ವೈಫಲ್ಯ ಮತ್ತು ಇತರೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಐದು ದಶಕಗಳ ವೃತ್ತಿಜೀವನದಲ್ಲಿ ಮಲಯಾಳಂ ಮತ್ತು ತಮಿಳಿನಲ್ಲಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜೊತೆಗೆ ಐದು ವರ್ಷಗಳ ಕಾಲ ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.ಮಲಯಾಳಂ ಚಲನಚಿತ್ರರಂಗದ ನಿರ್ಮಾಪಕ ದಿವಂಗತ ಭರತನ್ ಅವರನ್ನು ವಿವಾಹವಾದ ಲಲಿತಾ ಅವರಿಗೆ ಸಿದ್ಧಾರ್ಥ್ ಎಂಬ ಮಗ ಮತ್ತು ಶ್ರೀಕುಟ್ಟಿ ಎಂಬ ಮಗಳಿದ್ದಾಳೆ.
ಲಲಿತಾ ಅವರ ಸಾಧನೆಯನ್ನು ಗುರುತಿಸಿ ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳೊಂದಿಗೆ ಅತ್ಯುತ್ತಮ ಪೋಷಕ ನಟಿ ಎಂದು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 1999ರಲ್ಲಿ ‘ಅಮರಂ’ ಮತ್ತು 2000 ರಲ್ಲಿ ‘ಶಾಂತಂ’ ಪಾತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.”ಲಲಿತಾ ಅವರು ತಮ್ಮ ನಟನಾ ಕೌಶಲ್ಯದಿಂದ ವಿವಿಧ ತಲೆಮಾರುಗಳ ಜನರ ಹೃದಯವನ್ನು ಗೆದ್ದಿದ್ದಾರೆ. ಕೇರಳ ಲಲಿತಾ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯಾಗಿ ಅವರು ನೀಡಿದ ಕೊಡುಗೆ ಅನನ್ಯ. ಯಾವಾಗಲೂ ಪ್ರಗತಿಪರ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಕೊಂಡಾಡಿದ್ದಾರೆ.👇👇👇👇👇
👉K. P. A. C. Lalitha wikipedia