ನೆಲ್ಯಾಡಿ: ನೇರ್ಲ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು ಇವರು ಧ್ವಜಾರೋಹಣ ನೆರವೇರಿಸಿದರು.
ಶಾಲಾ ಮಕ್ಕಳಿಂದ ನೇರ್ಲ ಪೇಟೆಯವರೆಗೆ ಸ್ವಾತಂತ್ರೋತ್ಸವದ ಪಥಸಂಚಲ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ನೇರ್ಲ ಪೇಟೆಯ ಅಂಗಡಿ ಮಾಲೀಕರುಗಳು, ಮತ್ತು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರುಗಳು ಸಿಹಿ ಮತ್ತು ಪಾನೀಯ ವಿತರಿಸಿದರು.
ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಬಿಜೇರು, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವಾಣಿ ಬಿಜೇರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಂದಾ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿಧರ.ಪಿ, ಸೈನಿಕ ಸಂತೋಷ್ ನೇರ್ಲ, ಹಳೆವಿಧ್ಯಾರ್ಥಿ ಸಂಘದ ಉಪಾಧ್ಯಕ್ಷ ಅಬ್ರಹಾಂ ಮತ್ತು ಕಾರ್ಯದರ್ಶಿ ದುರ್ಗಾ ಪ್ರಸಾದ್, ಸಿದ್ಧಿವಿನಾಯಕ ಭಜನಾ ಮಂದಿರ ನೇರ್ಲದ ಅಧ್ಯಕ್ಷ ಅಕ್ಷತ್ ನೇರ್ಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಚ್ಲಂಪಾಡಿ ಒಕ್ಕೂಟ ಅಧ್ಯಕ್ಷ ಚೆನ್ನಪ್ಪ ಗೌಡ ಕುಡಾಲ, ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಸ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಕಲಿಕೆಯಲ್ಲಿ ಸಾಧನೆಗೈದ ಮಕ್ಕಳನ್ನು ಅಭಿನಂದಿಸಲಾಯಿತು. ಬಳಿಕ ಶಾಲಾ ಮಕ್ಕಳಿಂದ, ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರುಗಳು, ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಊರ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ.ಎಸ್ ಸ್ವಾಗತಿಸಿದರು. ಶಿಕ್ಷಕ ಡಾ.ಗಿರೀಶ್ ಹೆಚ್.ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಭೋಜನದ ವ್ಯವಸ್ಥೆಯನ್ನು ನೇರ್ಲ ಕ್ರಿಕೆಟರ್ಸ್ ಅಕಾಡೆಮಿಯ ಸದಸ್ಯರುಗಳು, ಊರ ವಿದ್ಯಾಭಿಮಾನಿಗಳ ಸಹಯೋಗದೊಂದಿಗೆ ದಿವಂಗತ ಶಿಕ್ಷಕಿ ಏಲಿಯಮ್ಮ ಪಿ.ಸಿ (ತಾರಾ ಟೀಚರ್) ರವರ ಸಂಸ್ಮರಣೆಗಾಗಿ ಆಯೋಜಿಸಿದ್ದರು.