
ನೆಲ್ಯಾಡಿ: ಕೊಪ್ಪ ಮಾದೇರಿ ಅಂಗನವಾಡಿಯಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ಓಡಿಯಪ್ಪ ಕುಂಬಾರ ಅವರು ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ನೆಲ್ಯಾಡಿ ಜೇಸಿ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್ ಅವರು ಮಕ್ಕಳಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಬೇಕು. ದೇಶಕ್ಕೆ ಸ್ವತಂತ್ರ ತಂದುಕೊಟ್ಟವರ ಬಲಿದಾನದ ಬಗ್ಗೆ ತಿಳಿಸಿ ಕೊಟ್ಟಲ್ಲಿ ಮಾತ್ರ ಮಕ್ಕಳಲ್ಲಿ ದೇಶದ ಬಗೆಗಿನ ಅಭಿಮಾನ, ಸ್ವಾತಂತ್ರ ಹಬ್ಬದ ಆಚರಣೆಯ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.

ವೇದಿಕೆಯಲ್ಲಿ ವೆಂಕಪ್ಪ ಕುಂಬಾರ, ಹೇಮಾನಂದ ಕುಂಬಾರ, ನವೀನ್ ಕುಂಬಾರ. ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ತಿಲಕ, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಮಹಿಳೆಯರು ಭಾಗವಹಿಸಿದರು.
ಸೌಮ್ಯ ಸ್ವಾಗತಿಸಿದರು. ಮಾಲತಿ ಕಾರ್ಯಕ್ರಮ ನಿರೂಪಿಸಿದರು, ರಾಜೀವಿ ವಂದಿಸಿದರು






