
ನೇಸರ ಫೆ.24: ಪುತ್ತೂರು ವಲಯದ ಮುಖ್ಯಗುರುಗಳಾದ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನಸ್ ರವರ ನೇತೃತ್ವದಲ್ಲಿ ಫೆ.23ರಂದು ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ಚರ್ಚಿನ ವಾರ್ಷಿಕ ಹಬ್ಬದ ಪ್ರಯುಕ್ತ ಬೆಳಗ್ಗೆ 10ಕ್ಕೆ ದಿವ್ಯಬಲಿಪೂಜೆಯನ್ನು ನೆರವೇರಿಸಿದರು.ಕೊಕ್ಕಡ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಜಗದೀಶ್ ಪಿಂಟೋ ಹಾಗೂ ವಲಯದ ಧರ್ಮಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜೃಂಭಣೆಯಿಂದ ವಾರ್ಷಿಕ ಹಬ್ಬ ಆಚರಿಸಲಾಯಿತು.ಸಹಕರಿಸಿದ ಎಲ್ಲಾ ಸದಸ್ಯರಿಗೆ ಧರ್ಮಗುರುಗಳು ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷರಾದ ಲಾರೆನ್ಸ್ ಪ್ಯಾಸ್,ಕಾರ್ಯದರ್ಶಿ ಪ್ರವೀಣ್ ಮೊಂತೇರೋ,ಸದಸ್ಯರು ಹಾಗೂ ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
—ಜಾಹೀರಾತು—




