ಕಾಂಚನ: ಆಟಿಡೊಂಜಿ ದಿನ ಕಾರ್ಯಕ್ರಮ

ಶೇರ್ ಮಾಡಿ

ಕಾಂಚನ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಮಣ್ಯಂ ಪ್ರೌಢಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿ ಪುತ್ತೂರು ತಾಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕವಿಷ್ಣು ಪ್ರಸಾದ್ ಅವರು ದೀಪ ಬೆಳಗಿಸಿ ಕಳಸೆಗೆ ಭತ್ತ ಹಾಕುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಆಟಿ ತಿಂಗಳ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.

ಮುಖ್ಯಶಿಕ್ಷಕ ರಮೇಶ ಮಯ್ಯ ಆಟಿ ತಿಂಗಳ ವಿವಿಧ ಆಚರಣೆಗಳಲ್ಲಿ ಒಂದಾದ ಹಾಲೆಮರದ ತೊಗಟೆಯ ಮಹತ್ವ ಮತ್ತು ಆಟಿ ತಿಂಗಳಿನ ವಿವಿಧ ಮದ್ದಿನ ಗುಣದ ಮಹತ್ವವನ್ನು ವಿವರಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಯನ ಆಟಿ ತಿಂಗಳ ಆಚರಣೆಯ ಮಹತ್ವವನ್ನು ವಿವರಿಸಿದರು.

ವಿದ್ಯಾರ್ಥಿನಿ ಮೋಕ್ಷಿತಾ ತುಳು ನಾಡಿನ ಸಂಸ್ಕೃತಿಯ ಬಗ್ಗೆ ತುಳುವಿನಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಆಟಿಯ ಕುರಿತಾದ ಹಾಡುಗಳು ಮತ್ತು ಆಟಿಕಳೆಂಜ ನೃತ್ಯಗಳು ವೇದಿಕೆಯಲ್ಲಿ ಮೂಡಿಬಂದವು. ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ಆಟಿಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನವನ್ನು ಅತಿಥಿಗಳು ವೀಕ್ಷಿಸಿದರು. ಸುಮಾರು 15 ಬಗೆಯ ಆಟಿಯ ತಿಂಡಿ ತಿನಿಸುಗಳು ಊಟಕ್ಕೆ ತಯಾರು ಮಾಡಲಾಗಿತ್ತು.

ವಿದ್ಯಾರ್ಥಿನಿ ಜೀವಿತಾ ಸ್ವಾಗತಿಸಿದರು, ನವ್ಯಶ್ರೀ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ನಿಕ್ಷಿತ ವಂದಿಸಿದರು.

Leave a Reply

error: Content is protected !!