ನೆಲ್ಯಾಡಿ ಸರ್ವಿಸ್ ರಸ್ತೆ ಶೀಘ್ರ ದುರಸ್ಥಿಗಾಗಿ ಎಸ್ ಡಿ ಟಿ ಯು ವತಿಯಿಂದ ಅಧಿಕಾರಿಗಳಿಗೆ ಮನವಿ

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 75ರ ಅಗಲೀಕರಣದಿಂದ ಎಲ್ಲಾ ವಾಹನಗಳು ನೆಲ್ಯಾಡಿ ಪೇಟೆಯ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಸರ್ವಿಸ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಮಳೆಗಾಲದಲ್ಲಿ ಹೊಂಡದಲ್ಲಿ ನೀರು ತುಂಬಿ ಪಾದಚಾರಿಗಳಿಗೆ ಮತ್ತು ಅಂಗಡಿಯವರಿಗೆ ಕೆಸರಿನ ಸಮಸ್ಯೆ, ಬೇಸಿಗೆ ಕಾಲದಲ್ಲಿ ದೂಳಿನ ಸಮಸ್ಯೆ ಎದುರಿಸಬೇಕಾಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮಂಗಳವಾರ ಕೆ ಎನ್ ಆರ್ ಕಂಪನಿ ಅಧಿಕಾರಿಗಳಿಗೆ ನೆಲ್ಯಾಡಿ ಸೋಶಿಯಲ್ ಡೆಮೋಕ್ರೇಟಿಕ್ ಟ್ರೇಡ್ ಯೂನಿಯನ್ ವತಿಯಿಂದ ನೆಲ್ಯಾಡಿ ಪೋಲೀಸರ ಸಮ್ಮುಖದಲ್ಲಿ ಮನವಿ ನೀಡಲಾಯಿತು.

ಹತ್ತು ದಿನಗೊಳಗೆ ದುರಸ್ತಿ ಕಾರ್ಯ ಮಾಡಿ ಕೊಡುವ ಭರವಸೆ ಅಧಿಕಾರಿಗಳು ನೀಡಿದರು. ತಪ್ಪಿದ್ದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವ ಬಗ್ಗೆ ಎಸ್ ಡಿ ಟಿ ಯು ಅವರಿಗೆ ಎಚ್ಚರಿಕೆ ನೀಡಿತು.

ಈ ಸಂಧರ್ಭದಲ್ಲಿ ಎಸ್ ಡಿ ಟಿ ಯು ನೆಲ್ಯಾಡಿ-ಕೌಕ್ರಾಡಿ ಅಧ್ಯಕ್ಷ ಹನೀಫ್ ಬೈಲು, ಕಾರ್ಯದರ್ಶಿ ಸಿದ್ದಿಕ್, ಎಸ್ ಡಿ ಟಿ ಯು ಆಟೋ ಯೂನಿಯನ್ ಅಧ್ಯಕ್ಷ ರಹಿಮಾನ್ ಹಾಗೂ ಎಸ್ ಡಿ ಟಿ ಯು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

error: Content is protected !!