
ಕೊಕ್ಕಡ: ಶಿಶಿಲದ ಶ್ರೀಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಪತ್ ಶುಕ್ರವಾರ ಪ್ರಯುಕ್ತ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ, ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ, ಗಂಧ ಅಭಿಷೇಕ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಶ್ರೀಸರ್ವಾಹ್ನ ಯಕ್ಷ ಆರಾಧನೆಯನ್ನು ಅಳದಂಗಡಿಯ ಪ್ರತಿಷ್ಠಾಪರೋಹಿತರಾದ ಪದ್ಮಪ್ರಭ ಇಂದ್ರರು, ಅರಹಂತ ಇಂದ್ರ, ಶ್ರೀಕೀರ್ತಿ ಇಂದ್ರ. ಇನ್ನಿತರ ಪುರೋಹಿತರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಲೋಕ ಕಲ್ಯಾಣರ್ಥವಾಗಿ ಮಾಡಿದ ಆರಾಧನೆ ಪೂಜಾ ಕರ್ತೃಗಳಾಗಿ ನಾರಾವಿ ಮೇಲoಟೆ ಗುತ್ತು ಪ್ರೇಮ ನಿಲಯದ ಪ್ರೇಮಕಲಾ ಭಾಗವಹಿಸಿದ್ದರು. ಆಡಳಿತ ಮಂಡಳಿಯ ಡಾ ಕೆ.ಜಯಕೀರ್ತಿ ಜೈನ್, ವಿಜಯಕುಮಾರ್, ಜಿನರಾಜ ಪೂವಣಿ, ಫಣಿರಾಜ್ ಜೈನ್, ಗುಣವರ್ಮ, ವೀರೇಂದ್ರ ಕುಮಾರ್, ಜಿತೇದ್ರ ಜೈನ್, ರವಿರಾಜ್ ಪರಪ್ಪು ಹಾಗೂ ನೂರಾರು ಶ್ರಾವಕ -ಶ್ರಾವಕಿಯರು ಭಾಗವಹಿಸಿದರು.






