ನೆಲ್ಯಾಡಿ ದುಗಾಶ್ರೀ ಕಟ್ಟಡದಲ್ಲಿ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯ ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ: ಹೊಸಮಠ ಬಲ್ಯ ಶ್ರೀಪೂರ್ಣ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ಸಹ ಸಂಸ್ಥೆ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯ ಸೆ.5ರಂದು ಬೆಳಿಗ್ಗೆ ನೆಲ್ಯಾಡಿ ದುಗಾಶ್ರೀ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಬೆಳಿಗ್ಗೆ ಚಿಕಿತ್ಸಾಲಯದಲ್ಲಿ ಗಣಹೋಮ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನಡೆಯಿತು. ಪುರೋಹಿತರಾದ ಗೋಪಾಲಕೃಷ್ಣ ಭಟ್ ಮಿತ್ತೂರು ಅವರು ಪೂಜೆ ನೆರವೇರಿಸಿದರು. ನಂತರ ಚಿಕಿತ್ಸಾಲಯದ ವೈದ್ಯ ಡಾ.ಸುಧನ್ವ ಕೂಡೂರು ಅವರ ಅಜ್ಜಿ ಕಮಲಕೃಷ್ಣ ಕೂಡೂರು ಅವರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಚಿಕಿತ್ಸೆ ಪಡೆದುಕೊಂಡವರು ಆರೋಗ್ಯವಂತರಾಗಲಿ. ಡಾ.ಸುಧನ್ವ ಅವರಿಗೆ ಜನರ ಸೇವೆ ಮಾಡುವ ಅವಕಾಶ ಒದಗಿಬರಲಿ. ಊರಿನ ಜನರ ಪ್ರೀತಿ, ವಿಶ್ವಾಸ ಲಭಿಸಿ ಕೀರ್ತಿ, ಹೆಸರು ಪಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಅತಿಥಿಯಾಗಿದ್ದ ನೆಲ್ಯಾಡಿಯ ಜ್ಯೋತಿಷಿ ಶ್ರೀಧರ ಗೋರೆ ಅವರು ಮಾತನಾಡಿ, ನೆಲ್ಯಾಡಿಯಲ್ಲಿ ಆಯುರ್ವೇದ ಚಿಕಿತ್ಸಾಲಯವಿದ್ದರೂ ಪಂಚಕರ್ಮ ಚಿಕಿತ್ಸೆಯಲ್ಲಿ ಎಂ.ಡಿ.ಮಾಡಿರುವ ಡಾ.ಸುಧನ್ವ ಅವರು ನೆಲ್ಯಾಡಿಯಲ್ಲಿ ಆಯುರ್ವೇದ ಚಿಕಿತ್ಸಾಲಯ ಆರಂಭಿಸಿರುವುದು ಸಂತಸ ತಂದಿದೆ. ಆಯುರ್ವೇದ ಚಿಕಿತ್ಸೆ ಋಷಿ ಮುನಿಗಳ ಕಾಲದಿಂದಲೂ ಚಾಲ್ತಿಯಲ್ಲಿದೆ. ಇದೊಂದು ದೇಹವನ್ನು ಉಳಿಸುವ ಮತ್ತು ರೋಗವನ್ನು ಪರಿಹಾರ ಮಾಡುವ ಚಿಕಿತ್ಸೆಯಾಗಿದೆ. ಈ ಚಿಕಿತ್ಸಾಲಯಕ್ಕೆ ಬಂದವರೆಲ್ಲರೂ ಗುಣಮುಖರಾಗಲಿ. ಇದರಿಂದ ಚಿಕಿತ್ಸಾಲಯಕ್ಕೂ, ವೈದ್ಯರಿಗೂ ಕೀರ್ತಿ ಬರಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿ ಮಹಾಲಿಂಗೇಶ್ವರ ಭಟ್‍ರವರು ಮಾತನಾಡಿ, ಡಾ.ಸುಧನ್ವ ಅವರು ಸಮಾಜ ಸೇವೆಯ ಧ್ಯೇಯದೊಂದಿಗೆ ಚಿಕಿತ್ಸಾಲಯ ಆರಂಭಿಸಿದ್ದಾರೆ. ಈ ಚಿಕಿತ್ಸಾಲಯಕ್ಕೆ ಬರುವ ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ ಎಂದರು. ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್‍ನ ಮಾಲಕ ಸುಬ್ರಹ್ಮಣ್ಯ ಆಚಾರ್ಯರವರು ಮಾತನಾಡಿ, ಶ್ರೀಪೂರ್ಣ ಚಿಕಿತ್ಸಾಲಯದಿಂದ ನೆಲ್ಯಾಡಿಯ ಜನತೆಗೆ ಉತ್ತಮ ಸೇವೆ ಸಿಗಲಿ ಎಂದರು.

ವಿದ್ಯಾಭಾರತಿ ದ.ಕ.ಭಾರತ ಪ್ರಮುಖ್ ವೆಂಕಟರಮಣ ಭಟ್ ಮಂಕುಡೆ, ಪೌಲರ್ ವೆಸ್ಟ್ರೂಮ್ ಕಂಪನಿ ದ.ಕ.ಭಾರತ ಮುಖ್ಯಸ್ಥ ಬಿ.ಗಣಪತಿ ಕೂಳೂರು, ಮುಂಬೈ ಕೋಸ್ಟಲ್ ರೋಡ್ ಪ್ರಾಜೆಕ್ಟ್‍ನ ಉಪಾಧ್ಯಕ್ಷರಾ ಸುಬ್ರಹ್ಮಣ್ಯ ಭಟ್, ಸತೀಶ್ ಭಟ್ ದುರ್ಗಾಶ್ರೀ, ರವಿಪ್ರಸಾದ್ ಆಚಾರ್ಯ ನೆಲ್ಯಾಡಿ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯ ಉದಯಕುಮಾರ್ ದೋಂತಿಲ, ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ನಾರಾಯಣ ಕೊಲ್ಲಿಮಾರ್ ಬಲ್ಯ, ಆಲಂಕಾರು ಭಾರತಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ, ಮಾಜಿ ಅಧ್ಯಕ್ಷ ಕರುಣಾಕರ ಗೋಗಟೆ, ಸಂಗೀತ ವಿದ್ವಾನ್ ಕಾಂಚನ ಈಶ್ವರ ಭಟ್, ಕಾಸರಗೋಡು ಸರಕಾರಿ ಆಸ್ಪತ್ರೆ ವೈದ್ಯೆ ಡಾ.ಜಯಶ್ರೀ ನಾಗರಾಜ್, ಬಲ್ಯ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಮಚರಣ್ ರೈ ಮಾಣಿಗ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಎಂ.ಆರ್.ಹೊಸಮಠ, ನೆಲ್ಯಾಡಿ ಶ್ರೀರಾಮ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಳೆ, ಹವ್ಯಕ ಮಹಾಮಂಡಲದ ಮಾಜಿ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಹೋಮಿಯೋಪತಿ ವೈದ್ಯ ಡಾ.ಅನೀಶ್, ಡಾ.ಬಾಲಸುಬ್ರಹ್ಮಣ್ಯ, ಡಾ.ರಾಮಪ್ರಕಾಶ್, ಡಾ.ಶಿವಶಂಕರ ಶಾಸ್ತ್ರಿ, ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಮತ್ತಿತರ ಪ್ರಮುಖರು ಭೇಟಿ ನೀಡಿ ಶುಭಹಾರೈಸಿದರು.

ಡಾ.ಸುರೇಶ್ ಕೂಡೂರು ಸ್ವಾಗತಿಸಿ ನಿರೂಪಿಸಿದರು. ಡಾ.ಸುಧನ್ವ ಕೂಡೂರು ವಂದಿಸಿದರು. ದೇವಕಿ ಎಸ್.ಕೂಡೂರು, ಡಾ.ಸುಧಾಂಶ್ ಕೂಡೂರು ಹಾಗೂ ಕೂಡೂರು ಕುಟುಂಬಸ್ಥರು ಸಹಕರಿಸಿದರು.

ಲಭ್ಯ ಸೇವೆಗಳು:
ಶ್ರೀಪೂರ್ಣ ಚಿಕಿತ್ಸಾಲಯದಲ್ಲಿ ವಾತವ್ಯಾಧಿ, ಸಕ್ಕರೆ ಖಾಯಿಲೆ, ಬಿ.ಪಿ., ಆಮವಾತ, ಗಂಟುನೋವು, ಪಾಶ್ರ್ವವಾಯು, ಸ್ಟಾಂಡಿಲೋಸಿಸ್, ಮೈಗ್ರೇನ್, ಮೂಲವ್ಯಾಧಿ, ಅಜೀರ್ಣ, ಅಸಿಡಿಟಿ, ಮಲಬದ್ಧತೆ, ಐ.ಬಿ.ಎಸ್., ಪ್ರೊಸ್ಟೇಟ್ ಸಮಸ್ಯೆ, ಮೂತ್ರದ ಕಲ್ಲು, ಪಿತ್ತದ ಕಲ್ಲು, ಜಾಂಡಿಸ್, ಜ್ವರ, ಚರ್ಮದೋಷ, ನರದ ತೊಂದರೆ, ಪಿ.ಸಿ.ಓ.ಡಿ., ನಿದ್ರಾಹೀನತೆ, ಥೈರಾಯ್ಡ್ ಸಮಸ್ಯೆ, ಹೃದ್ರೋಗ, ಉಬ್ಬಸ, ಕೆಮ್ಮು, ಸಂತಾನಹೀನತೆ, ಮಾನಸಿಕ ತೊಂದರೆಗಳು, ಮುಟ್ಟುದೋಷ, ಗರ್ಭಕೋಶದ ತೊಂದರೆ ಇತ್ಯಾದಿ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ.

ಸಂದರ್ಶನ ಸಮಯ:
ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ತನಕ ಆಗಿರುತ್ತದೆ. ಆದಿತ್ಯವಾರ ರಜಾ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9482660028ಗೆ ಸಂಪರ್ಕಿಸಬಹುದಾಗಿದೆ.

Leave a Reply

error: Content is protected !!